ಡೆವಿಸ್ ಕಪ್: ಲಿಯಾಂಡರ್ ಪೇಸ್ ಕೈಬಿಟ್ಟ ಮಹೇಶ್ ಭೂಪತಿ
ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರನ್ನು ನಾಳೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಉಜ್‌ಬೇಕಿಸ್ತಾನ ವಿರುದ್ಧದ ಡೆವಿಸ್ ಕಪ್ ನಿಂದ

Published On :
ಬೆಂಗಳೂರು: ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರನ್ನು ನಾಳೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಉಜ್‌ಬೇಕಿಸ್ತಾನ ವಿರುದ್ಧದ ಡೆವಿಸ್ ಕಪ್ ನಿಂದ ಕೈಬಿಡಲಾಗಿದೆ.
ಭಾರತ ತಂಡದ ಆಟವಾಡದ ನಾಯಕ ಮಹೇಶ್ ಭೂಪತಿ ಅವರು ಡೆವಿಸ್ ಕಪ್ ಎರಡನೇ ಸುತ್ತಿನ ಗ್ರೂಪ್ 1ರಲ್ಲಿ ಶ್ರೀರಾಮ್ ಬಾಲಾಜಿ ಜೊತೆ ರೋಹನ್ ಬೋಪಣ್ಣ ಅವರನ್ನು ಆಯ್ಕೆ ಮಾಡಿದ್ದಾರೆ.
ಏಪ್ರಿಲ್ 7ರಿಂದ 9ರವರೆಗೆ ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ನಡೆಯಲಿರುವ ಡೆವಿಸ್ ಕಪ್ ನ ಡಬಲ್ಸ್ ನಲ್ಲಿ ಬೋಪಣ್ಣ ಮತ್ತು ಬಾಲಾಜಿ ಉಜ್ ಬೆಕಿಸ್ತಾನದ ಫಾರುಖ್ ದಸ್ತೊವ್ ಮತ್ತು ಸಂಜಾರ್ ಫಯಾಝೀವ್ ಅವರೊಂದಿಗೆ ಸೆಣಸಲಿದ್ದಾರೆ. ಇನ್ನು ಸಿಂಗಲ್ಸ್ ನಲ್ಲಿ ಗಾಯಗೊಂಡ ಯುಕಿ ಭಾಂಬ್ರಿ ಬದಲು ರಾಮಕುಮಾರ್ ರಾಮನಾಥನ್ ಅವರು ಆಡಲಿದ್ದಾರೆ.
ಪೇಸ್ ಮತ್ತು ಬೋಪಣ್ಣ ಅವರನ್ನು ಮೀಸಲು ಆಟಗಾರರನ್ನಾಗಿ ಮಾಡಲಾಗಿತ್ತು. ಆದರೆ ನಾಲ್ಕು ದಿನಗಳ ಹಿಂದೆ ಯೂಕಿ ಭಾಂಬ್ರಿ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರಿಂದ ಅವರ ಸ್ಥಾನಕ್ಕೆ ಬೋಪಣ್ಣ ಅಥವಾ ಪೇಸ್ ಅವರಲ್ಲಿ ಒಬ್ಬರು ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಅಂತಿಮವಾಗಿ ರಾಮಕುಮಾರ್ ರಾಮನಾಥನ್ ಅವರು ಆಯ್ಕೆಯಾಗಿದ್ದಾರೆ.
ಒಂದು ಕಾಲದಲ್ಲಿ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಅವರು ಅಂತರಾಷ್ಟ್ರೀಯ ಡಬಲ್ಸ್ ಪಂದ್ಯಗಳಲ್ಲಿ ಜೊತೆಯಾಗಿ ಆಡಿ ಭಾರತಕ್ಕೆ ಕೀರ್ತಿ ತಂದಿದ್ದ ಜೋಡಿ ಈಗ ಮುನಿಸಿಕೊಂಡಿದ್ದು, ಕಳೆದ 27 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಲಿಯಾಂಡರ್ ಪೇಸ್ ಅವರನ್ನು ಡೆವಿಸ್ ಕಪ್ ತಂಡದಿಂದ ಕೈಬಿಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


