ಸಾನಿಯಾ-ಸ್ಟ್ರೈಕೋವಾ ಪಾನ್ ಪೆಸಿಫಿಕ್ ಓಪನ್ ಚಾಂಪಿಯನ್
ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದ 40ನೇ ಡಬ್ಲ್ಯೂಟಿಎ ಪ್ರಶಸ್ತಿ ಜಯಸಿದ್ದಾರೆ. ಜತೆಗಾರ್ತಿ ಜೆಕ್ ಗಣರಾಜ್ಯದ ಬಾರ್ಬರಾ...

ಟೋಕಿಯೋ: ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದ 40ನೇ ಡಬ್ಲ್ಯೂಟಿಎ ಪ್ರಶಸ್ತಿ ಜಯಸಿದ್ದಾರೆ. ಜತೆಗಾರ್ತಿ ಜೆಕ್ ಗಣರಾಜ್ಯದ ಬಾರ್ಬರಾ ಸ್ಟ್ರೈಕೋವಾ ಜತೆ ಸೇರಿ ಸಾನಿಯಾ ಮಿರ್ಜಾ ಟೊರೇ ಪಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ಫೈನಲ್ ನಲ್ಲಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಚೀನಾದ ಚೆನ್ ಲಿಯಾಂಗ್, ಜಾವೋ ಯಂಗ್ ಜೋಡಿಯನ್ನು 6-1,6-1 ಸೆಟ್ ಗಳಿಂದ ಸಾನಿಯಾ-ಸ್ಟ್ರೈಕೋವಾ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗೀಸ್ ಜತೆ ಸೇರಿ ಹಲವು ಚಾಂಪಿಯನ್ ಪಟ್ಟ ಅಲಂಕರಿಸಿ ವಿಶ್ವ ಅಗ್ರ ಶ್ರೇಯಾಂಕಿತ ಜೋಡಿ ಎಂದು ಖ್ಯಾತಿ ಗಳಿಸಿದ್ದ ಸಾನಿಯಾ-ಮಾರ್ಟಿನಾ ಹಿಂಗೀಸ್ ಇತ್ತೀಚೆಗಷ್ಟೇ ಹಿಂಗೀಸ್ ರನ್ನು ತೊರೆದು ಬಾರ್ಬರಾ ರನ್ನು ಸೇರಿದ್ದು, ಈ ಜೋಡಿಗೆ ಇದು ಎರಡನೇ ಪ್ರಶಸ್ತಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


