ಮೋದಿ ಹುಟ್ಟುಹಬ್ಬ: ಗಮನ ಸೆಳೆದ ಸಾನಿಯಾ ಮಿರ್ಜಾ ಪ್ರಶಂಸಾರ್ಹ ಬರಹ
ತಾರೆ ಸಾನಿಯಾ ಮಿರ್ಜಾ ಪ್ರಧಾನಿ ಮೋದಿ ಅವರ ಬಗ್ಗೆ ಬರೆದಿರುವ ಬರಹ ಪ್ರಶಂಸೆಗೆ ಪಾತ್ರವಾಗಿದೆ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ನರೇಂದ್ರ ಮೋದಿ ಗುಜರಾತ್ ಗೆ ತೆರಳಿ ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸೆಲಬ್ರಿಟಿಗಳು ಸೇರಿದಂತೆ ಹಲವು ಮಂದಿ ಮೋದಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ್ಮದಿನದ ಶುಭಾಶಯ ತಿಳಿಸಿದ್ರು.
ಆದರೆ ಇವುಗಳೆಲ್ಲಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪ್ರಧಾನಿ ಮೋದಿ ಅವರ ಬಗ್ಗೆ ಬರೆದಿರುವ ಬರಹ ಪ್ರಶಂಸೆಗೆ ಪಾತ್ರವಾಗಿದೆ.
ನನ್ನ ಜೀವನದಲ್ಲಿ ಡೈನಾಮಿಕ್ ಹೀರೋ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎರಡು ಬಾರಿ ಭೇಟಿ ಮಾಡುವ ಅವಕಾಶ ಸಿಕ್ಕಿದೆ. 2014 ರ ಯುಎಸ್ ಓಪನ್ ಟೆನಿಸ್ ನಲ್ಲ ಜಯಗಳಿಸಿದಾಗ ನಾನು ಮೋದಿ ಅವರನ್ನು ಭೇಟಿ ಮಾಡಿದ್ದೆ. ನರೇಂದ್ರ ಮೋದಿ ಅವರ ವಾಕ್ ಚಾತುರ್ಯ, ಅದ್ಭುತ ನೆನಪಿನ ಶಕ್ತಿ ನನ್ನನ್ನು ಬೆರಗುಗೊಳಿಸಿತು ಎಂದು ಹೇಳಿದ್ದಾರೆ.
ಮುಕ್ತವಾಗಿ ಮಾತನಾಡುವ ಮೋದಿ ಅವರಿಗೆ ದೇಶದ ಅಭಿವೃದ್ಧಿ ಬಗ್ಗೆ ಹೊಸ ಹೊಸ ಯೋಜನೆಗಳಿವೆ ಎಂದು ಸಾನಿಯಾ ಹೊಗಳಿದ್ದಾರೆ.
ಮತ್ತೊಮ್ಮೆ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಆಗ ನನಗೆ ಆಶ್ಟರ್ಯ ಕಾದಿತ್ತು., ಮೋದಿಜೀ ನನ್ನ ಸಹೋದರಿ ಬಗ್ಗೆ ವಿಚಾರಿಸಿದ್ದರು. ಅವರ ಮಾತುಗಳು ನನಗೆ ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಣೆ ನೀಡಿವೆ ಎಂದು ಸಾನಿಯಾ ತಿಳಿಸಿದ್ದಾರೆ.
Of course
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


