ಐಒಸಿ ಅಥ್ಲೀಟ್ ಗಳ ಆಯೋಗದ ಸದಸ್ಯೆಯಾಗಿ ಸೈನಾ ನೆಹ್ವಾಲ್ ನೇಮಕ
ಭಾರತೀಯ ಕ್ರೀಡಾ ಪಟು ಸೈನಾ ನೆಹ್ವಾಲ್ ಅಂತರರಾಷ್ಟ್ರೀಯ ಒಲಂಪಿಕ್ ಅಥ್ಲೀಟ್ ಕಮಿಟಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ...

ಹೈದರಾಬಾದ್ : ಭಾರತೀಯ ಕ್ರೀಡಾ ಪಟು ಸೈನಾ ನೆಹ್ವಾಲ್ ಅಂತರರಾಷ್ಟ್ರೀಯ ಒಲಂಪಿಕ್ ಅಥ್ಲೀಟ್ ಕಮಿಟಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಐಒಸಿ ಅಧ್ಯಕ್ಷ ಥಾಮಸ್ ಬಾಚ್ ರವಾನಿಸಿರುವ ಪತ್ರ ಸೈನಾಗೆ ನಿನ್ನೆ ರಾತ್ರಿ ತಲುಪಿದೆ, ಇದರಿಂದಾಗಿ ಸೈನಾ ಗೆ ಮತ್ತೊಂದು ಗೌರವ ಸಿಕ್ಕಿದಂತಾಗಿದೆ.
ಏಂಜೆಲಾ ರುಗ್ಗಿರೋ ನೇತೃತ್ವದ ಈ ಆಯೋಗ 9 ಉಪಾಧ್ಯಕ್ಷರನ್ನು, 10 ಮಂದಿ ಸದಸ್ಯರನ್ನು ಒಳಗೊಂಡಿದೆ. ಭಾರತೀಯ ಕ್ರೀಡಾಪಟುವೊಬ್ಬರಿಗೆ ಸಿಕ್ಕಿರುವ ಅಪರೂಪದ ಗೌರವ ಇದಾಗಿದ್ದು, ಇದನ್ನು ಬ್ಯಾಡ್ಮಿಂಟನ್ ತಾರೆ ಸೈನಾ ಪಡೆದುಕೊಂಡಿದ್ದಾರೆ.
ಸೈನಾ ನೆಹ್ವಾಲ್ ನವೆಂಬರ್ 6ರಂದು ನಡೆಯಲಿರುವ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಆಕೆಯನ್ನು ಸಾಧಕಿಯನ್ನಾಗಿ ಗುರುತಿಸಿ ಸದಸ್ಯತ್ವ ನೀಡುತ್ತಿರುವ ಬಗ್ಗೆ ಬಹಳ ಆನಂದವಾಗಿದೆ, ಗಾಯದ ಸಮಸ್ಯೆಯಿಂದಾಗಿ ಒಲಂಪಿಕ್ಸ್ ನಲ್ಲಿ ಪದಕ ಗಳಿಸುವ ಆಸೆ ಈಡೇರಿಲಿಲ್ಲ ಎಂದು ಸೈನಾ ತಂದೆ ಹರ್ವಿರ್ ಸಿಂಗ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


