ಪಿವಿ ಸಿಂಧು ಚೀನಾ ಓಪನ್ ಟೂರ್ನಿ ಚಾಂಪಿಯನ್
ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತ ಸ್ಟಾರ್ ಷಟ್ಲರ್ ಪಿವಿ ಸಿಂಧು ಚೀನಾ ಓಪನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.

Published On :
ನವದೆಹಲಿ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತ ಸ್ಟಾರ್ ಷಟ್ಲರ್ ಪಿವಿ ಸಿಂಧು ಚೀನಾ ಓಪನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಚೀನಾದ ಸೂನ್ ಯು ಅವರನ್ನು 21-11, 17-21, 21-11 ಸೆಟ್ ಗಳ ಅಂತರದಿಂದ ಮಣಿಸಿದ್ದು ಚೀನಾ ಓಪನ್ ಟೂರ್ನಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೇವಲ 17 ನಿಮಿಷಗಳಲ್ಲಿ ಮೊದಲ ಪಂದ್ಯವನ್ನು(ಸೆಟ್) 21-11 ರ ಅಂತರದಲ್ಲಿ ಮುಕ್ತಾಯಗೊಳಿಸಿದ ಸಿಂಧು, ಎರಡನೇ ಸೆಟ್ ನಲ್ಲಿ 14-10 ಅಂತರವನ್ನು ಕಾಯ್ದುಕೊಂಡರು. ನಂತರದ ಸೆಟ್ ಗಳಲ್ಲಿ ಸತತ 6 ಪಾಯಿಂಟ್ ಗಳನ್ನು ಪಡೆಯುವ ಮೂಲಕ ಚೀನಾದ ಸೂನ್ ಯು ಸಮಬಲ ಸಾಧಿಸಿದರಾದರೂ, ಧೃತಿಗೆಡದ ಪಿವಿ ಸಿಂಧು ನಿರ್ಣಾಯಕ ಪಂದ್ಯದದಲ್ಲಿ 21-11 ಅಂತರ ಸಾಧಿಸುವ ಮೂಲಕ ಚೀನಾ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಹೈದರಾಬಾದ್ ನ ಆಟಗಾರ್ತಿ ಸಿಂಧು ತಮ್ಮ ವೃತ್ತಿಜೀವನದ ಮೊಟ್ಟ ಮೊದಲ ಸೂಪರ್ ಸೀರಿಸ್ ಪ್ರೀಮಿಯರ್ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


