ಏಶ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಉರಿ ದಾಳಿ ಹುತಾತ್ಮರಿಗೆ ಅರ್ಪಿಸಿದ ಭಾರತ ಹಾಕಿ ತಂಡ
ಭಾರತ ಹಾಕಿ ತಂಡದ ನಾಯಕ ಪಿ ಆರ್ ಶ್ರೀಜೇಶ್ ಏಶ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಕಪ್ ಅನ್ನು ಉರಿ ದಾಳಿ ಹುತಾತ್ಮ ಯೋಧರು ಹಾಗೂ ಅವರ ಕುಟುಂಬಕ್ಕೆ ಅರ್ಪಿಸಿದ್ದಾರೆ...

Published On :
ಭಾರತ ಹಾಕಿ ತಂಡದ ನಾಯಕ ಪಿ ಆರ್ ಶ್ರೀಜೇಶ್ ಏಶ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಕಪ್ ಅನ್ನು ಉರಿ ದಾಳಿ ಹುತಾತ್ಮ ಯೋಧರು ಹಾಗೂ ಅವರ ಕುಟುಂಬಕ್ಕೆ ಅರ್ಪಿಸಿದ್ದಾರೆ.
ಮಲೇಶ್ಯದಲ್ಲಿ ನಡೆದ ಕೂಟದ ಫೈನಲ್ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 3-2 ಗೋಲುಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ನಂತರ ವಿಜೇತ ತಂಡ ಭಾರತಕ್ಕೆ ಮರಳಿದ್ದು ಈ ವೇಳೆ ನಾಯಕ ಶ್ರೀಜೇಶ್ ಮಾಧ್ಯಮದವರೊಂದಿಗೆ ಮಾತನಾಡುತ್ತಾ ದೇಶಕ್ಕಾಗಿ ಪ್ರಾಣ ತೆತ್ತವರಿಗೆ ಈ ಟ್ರೋಫಿಯನ್ನು ಅರ್ಪಿಸುವುದಾಗಿ ಹೇಳಿದರು.
ಕುಟುಂಬವನ್ನೆಲ್ಲ ತೊರೆದು ಪ್ರಾಣವನ್ನು ಲೆಕ್ಕಿಸದೆ ಗಡಿಯಲ್ಲಿ ಹೋರಾಡಿ ವೀರ ಮರಣ ಹೊಂದುವ ಯೋಧರಿಗೆ ಈ ವಿಜಯವನ್ನು ಅರ್ಪಿಸುವುದಾಗಿ ಹೇಳಿದರು. ಗಡಿಯಲ್ಲಿ ಭಾರತೀಯ ಯೋಧರು ಪಾಕ್ ಸೈನಿಕರೊಂದಿಗೆ ಹೋರಾಡುವಂತೆ ನಾವು ಪಾಕಿಸ್ತಾನದ ಆಟಗಾರರೊಂದಿಗೆ ಹೋರಾಡಿ ಜಯ ಸಾಧಿಸಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
hockeyಹಾಕಿdedicateAsian Champions TrophyUri martyrsಅರ್ಪಣೆSreejeshಏಶ್ಯನ್ ಚಾಂಪಿಯನ್ ಟ್ರೋಫಿಶ್ರೀಜೇಶ್ಉರಿ ಹುತಾತ್ಮ ಯೋಧರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


