ಸಚಿನ್ ಸಹ ಮಾಲೀಕತ್ವದ ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ಕ್ಲಬ್ ಗೆ ಚಿರಂಜೀವಿ, ನಾಗಾರ್ಜುನ್ ಎಂಟ್ರಿ
ನಟ ಮತ್ತು ರಾಜಕಾರಣಿ ಚಿರಂಜೀವಿ, ನಟ ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ಭಾರತೀಯ ಚಿತ್ರೋದ್ಯಮದ ಕೆಲವು ದಿಗ್ಗಜರು....

Published On :
ತಿರುವನಂತಪುರಂ: ನಟ ಮತ್ತು ರಾಜಕಾರಣಿ ಚಿರಂಜೀವಿ, ನಟ ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ಭಾರತೀಯ ಚಿತ್ರೋದ್ಯಮದ ಕೆಲವು ದಿಗ್ಗಜರು ಬುಧವಾರ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಹ ಮಾಲೀಕತ್ವದ ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ಕ್ಲಬ್ ಗೆ ಸೇರಿಕೊಂಡಿದ್ದಾರೆ.
ಚಿರಂಜೀವಿ, ನಾಗಾರ್ಜುನ, ನಿರ್ಮಾಪಕ ಅಲ್ಲು ಅರವಿಂದ್ ಹಾಗೂ ಉದ್ಯಮಿ, ಸೀರಿಯಲ್ ನಿರ್ಮಾಪಕ ನಿಮ್ಮಗಡ ಪ್ರಸಾದ್ ಅವರು ಬ್ಲಾಸ್ಟರ್ಸ್ ಸ್ಪೋರ್ಟ್ಸ್ ಪ್ರೈ, ಲಿ.ನಲ್ಲಿ ಹೂಡಿಕೆ ಮಾಡುವ ಮೂಲಕ ಸಚಿನ್ ಗೆ ಕೈಜೋಡಿಸಿದ್ದಾರೆ.
ಸಚಿನ್ ಹಾಗೂ ಕೇರಳ ಸರ್ಕಾರ ಜಂಟಿಯಾಗಿ ಕೇರಳದಲ್ಲಿ ಫುಟ್ಬಾಲ್ ಅಕಾಡೆಮಿ ಸ್ಥಾಪನೆಗೆ ಸಿದ್ಧತೆ ನಡೆಸಿದ್ದು, ಈ ಸಂಬಂಧ ಸಚಿನ್ ಹಾಗೂ ಸಹ ಮಾಲೀಕರಾದ ಚಿರಂಜೀವಿ, ನಾಗಾರ್ಜುನ್ ಹಾಗೂ ಇತರರು ಇಂದು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯ ಮಾಡುವಂಥ 100ಕ್ಕೂ ಹೆಚ್ಚು ಫುಟ್ಬಾಲ್ ಆಟಗಾರರನ್ನು ತಯಾರು ಮಾಡುವುದು ಅಕಾಡೆಮಿ ಪ್ರಮುಖ ಉದ್ದೇಶವಾಗಿದೆ.
ಕೇರಳದಲ್ಲಿ ಫುಟ್ಬಾಲ್ ಕ್ರೀಡೆ ಸಾಕಷ್ಟು ಜನಪ್ರಿಯ ಆಗಿರುವ ಹಿನ್ನೆಲೆಯಲ್ಲಿ ಪುಟ್ಬಾಲ್ ಅಕಾಡೆಮಿ ನಿರ್ಮಾಣಕ್ಕೆ ಸಂಬಂಧಿಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಬುಧವಾರ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಅಕಾಡೆಮಿಯಿಂದ ಸ್ಥಳೀಯ ಆಸಕ್ತರಿಗೆ ಉತ್ತಮ ವೇದಿಕೆ ನಿರ್ಮಾಣವಾಗಲಿದ್ದು, ಅಕಾಡೆಮಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು, ತರಬೇತಿಯನ್ನು ನೀಡುವುದು ಯೋಜನೆಯ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ. ಕೇರಳ ಬ್ಲಾಸ್ಟಸ್ ಒಟ್ಟಾರೆ ಯೋಜನೆಯ ಮುತುವರ್ಜಿ ವಹಿಸಲಿದ್ದು, ಅಕಾಡೆಮಿಯನ್ನು ನಡೆಸುವ ಎಲ್ಲಾ ಜವಾಬ್ದಾರಿ ಹೊತ್ತುಕೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sachin Tendulkarಸಚಿನ್ ತೆಂಡೂಲ್ಕರ್ChiranjeeviಚಿರಂಜೀವಿNagarjunaKerala Blastersಕೇರಳ ಬ್ಲಾಸ್ಟರ್ಸ್ನಾಗಾರ್ಜುನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


