ಕ್ರೀಡೆ

ವಿಜೇಂದರ್ ಸಿಂಗ್ಗೆ ಶಾಕ್ ಕೊಡ್ತೀನಿ ಅಂತ ತಾನೇ ಶಾಕ್ ತಿಂದ ಆಂಡ್ರೆಜ್ ಸೋಲ್ಡ್ರಾ

ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ ನಲ್ಲಿ ಸತತ ಆರನೇ ಜಯ ದಾಖಲಿಸಿದ್ದಾರೆ...

ವಿಜೇಂದರ್ ಸಿಂಗ್ಗೆ ಶಾಕ್ ಕೊಡ್ತೀನಿ ಅಂತ ತಾನೇ ಶಾಕ್ ತಿಂದ ಆಂಡ್ರೆಜ್ ಸೋಲ್ಡ್ರಾ
ವಿಜೇಂದರ್ ಸಿಂಗ್
Published On :

ಬೋಲ್ಟನ್: ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ ನಲ್ಲಿ ಸತತ ಆರನೇ ಜಯ ದಾಖಲಿಸಿದ್ದಾರೆ.

ಮ್ಯಾಕ್ರೋನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎದುರಾಳಿ ಪೋಲೆಂಡ್ ಬಾಕ್ಸರ್ ಆಂಡ್ರೆಜ್ ಸೋಲ್ಡ್ರಾರನ್ನು 8 ಸುತ್ತಿನ ಪಂದ್ಯದಲ್ಲಿ ಮೂರು ಸುತ್ತಿನಲ್ಲೇ ಸೊಲ್ಲೆತ್ತದಂತೆ ಮಾಡಿದರು.

30 ವರ್ಷದ ವಿಜೇಂದರ್ ಸಿಂಗ್ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತುಕೊಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ 98 ಅಮೆಚೂರ್ ಪಂದ್ಯಗಳನ್ನಾಡಿದ ಅನುಭವಿ ಸೋಲ್ಡ್ರಾ ವಿರುದ್ಧ ಮೊದಲ ಸುತ್ತಿನಲ್ಲೇ ವಿಜೇಂದರ್ ಎದುರಾಳಿಗೆ ಬಲವಾದ ಪಂಚ್ ನೀಡಿದರು.

ಇನ್ನು ಆಟದುದ್ದಕ್ಕೂ ಸೋಲ್ಡ್ರಾರಿಂದ ಹೊಡೆತ ಬೀಳದಂತೆ ನೋಡಿಕೊಂಡ ವಿಜೇಂದರ್ ಮೂರನೇ ಸುತ್ತಿನಲ್ಲಿ ಸೋಲ್ಡ್ರಾಗೆ ಬಲವಾದ ಪಂಚ್ ನೀಡಿದರು. ವಿಜೇಂದರ್ ಹೊಡೆತಕ್ಕೆ ತತ್ತರಿಸಿದ ಸೋಲ್ಡ್ರಾ ರಿಂಗ್ ಕಾರ್ನರ್ ಕಡೆಗೆ ಹೋಗಿ ಕುಸಿದು ಬಿದ್ದರು. ಈ ವೇಳೆ ರೆಫ್ರಿ ಸೋಲ್ಡ್ರಾ ಪರಿಸ್ಥಿತಿಯನ್ನು ಪರಿಶೀಲಿಸಿಸ ವಿಜೇಂದರ್ ವಿಜೇತ ಎಂದು ಘೋಷಿಸಿದರು.

ಸತತ ಐದು ಪಂದ್ಯಗಳಲ್ಲಿ ಜಯ ಗಳಿಸಿದ್ದ ವಿಜೇಂದರ್ ಸಿಂಗ್ ಗೆ ಆಘಾತ ನೀಡುವೆ. ನಿಜವಾದ ಬಾಕ್ಸರ್ ಹೊಡೆತ ಹೇಗಿರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಡುತ್ತೇನೆ ಎಂದು ತಾನೇ ಹೊಡೆತ ತಿಂದ ಸೋಲ್ಡ್ರಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.