ಕ್ರೀಡೆ

ಇರಾನಿ ಕಪ್: 480 ರನ್ ಬೆನ್ನಟ್ಟಿ ಜಯಗಳಿಸಿದ ಶೇಷ ಭಾರತ

ಕರ್ನಾಟಕದ ಕರುಣ್ ನಾಯರ್ ಮತ್ತು ಫೈಯಾಜ್ ಫಜಲ್ ಅಬ್ಬರದ ಬ್ಯಾಟಿಂಗ್‌ ನಿಂದಾಗಿ ರಣಜಿ ಚಾಂಪಿಯನ್ ಮುಂಬೈ ನೀಡಿದ್ದ 480 ರನ್ ಗಳ ಬೃಹತ್ ಗುರಿಯನ್ನು ಶೇಷ ...

ಇರಾನಿ ಕಪ್: 480 ರನ್ ಬೆನ್ನಟ್ಟಿ ಜಯಗಳಿಸಿದ ಶೇಷ ಭಾರತ
ಶೇಷ ಭಾರತ
Published On :

ಮುಂಬೈ: ಕರ್ನಾಟಕದ ಕರುಣ್ ನಾಯರ್ ಮತ್ತು ಫೈಯಾಜ್ ಫಜಲ್ ಅಬ್ಬರದ ಬ್ಯಾಟಿಂಗ್‌ ನಿಂದಾಗಿ ರಣಜಿ ಚಾಂಪಿಯನ್ ಮುಂಬೈ ನೀಡಿದ್ದ 480 ರನ್ ಗಳ ಬೃಹತ್ ಗುರಿಯನ್ನು  ಶೇಷ  ಭಾರತ ತಂಡ ಮುಟ್ಟಿ ಇರಾನಿ ಟ್ರೋಫಿಯನ್ನು ಗೆದ್ದುಕೊಂಡಿತು.

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಶೇಷ  ಭಾರತ ಪರ ಫೈಯಾಜ್‌ ಫಜಲ್ 127, ಸುದೀಪ್ ಚಟರ್ಜಿ 54, ಕರುಣ್ ನಾಯರ್ 94, ಸ್ಟುವರ್ಟ್ ಬಿನ್ನಿ 54 ಮತ್ತು ಶೆಲ್ಡನ್ ಜಾಕ್ಸನ್ 59 ರನ್ ಗಳ ಕೊಡುಗೆ ಪಂದ್ಯ ಗೆಲ್ಲಲು ನೆರವಾಯಿತು.

ಬುಧವಾರ ದಿನದಾಟದ ಕೊನೆಗೆ  ಶೇಷ  ಭಾರತ ತಂಡವು 1 ವಿಕೆಟ್‌ ನಷ್ಟಕ್ಕೆ 100 ರನ್ ಗಳಿಸಿತ್ತು. ಇನ್ನು 380 ರನ್‌ ಗಳಿಸುವ ಸವಾಲು ತಂಡದ ಮುಂದಿತ್ತು. ದಿನದಾಟದ ಕೋಟಾದಲ್ಲಿ ಇನ್ನು 20 ಎಸೆತಗಳು ಬಾಕಿಯಿರುವಾಗಲೇ ಗೆಲುವು ಒಲಿಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.