ಉದ್ದಿಪನ ಮದ್ದು ಸೇವನೆ: ಶರಪೋವಾ ಆಯ್ತು, ಇದೀಗ ಅಬೆಬಾ ಸರದಿ
ರಷ್ಯಾದ ಟೆನಿಸ್ ತಾರೆ ಮರಿಯಾ ಶರಪೋವಾ ಅವರು ನಿಷೇಧಕ್ಕೊಳಗಾಗಿರುವ ‘ಮೆಲ್ಡೊನಿಯಮ್’ ಔಷಧಿ ಸೇವಿನೆ ಪ್ರಕರಣ ಇನ್ನು ಹಚ್ಚ...

ಸ್ಟಾಕ್‌ಹೋಮ್: ರಷ್ಯಾದ ಟೆನಿಸ್ ತಾರೆ ಮರಿಯಾ ಶರಪೋವಾ ಅವರು ನಿಷೇಧಕ್ಕೊಳಗಾಗಿರುವ ‘ಮೆಲ್ಡೊನಿಯಮ್’ ಔಷಧಿ ಸೇವಿನೆ ಪ್ರಕರಣ ಇನ್ನು ಹಚ್ಚ ಹಸಿರಿರುವಾಗಲೇ ಸ್ವೀಡನ್‌ನ ದೂರ ಅಂತರದ ಓಟಗಾರ್ತಿ ಅಬೆಬಾ ಅರೆಗಾವಿ ‘ಮೆಲ್ಡೊನಿಯಮ್’ ಔಷಧಿ ಸೇವಿಸಿದ್ದು ಸಾಬೀತಾಗಿ ಕ್ರೀಡಾವಲಯದಲ್ಲಿ ಆತಂಕ ಮೂಡಿಸಿದೆ.
ಉದ್ದಿಪನ ಮದ್ದು ಸೇವನೆಯಲ್ಲಿ ಸಿಕ್ಕಿಬಿದ್ದಿರುವ ಟೋಕಿಯೊ ಮ್ಯಾರಥಾನ್ ಚಾಂಪಿಯನ್ ಎನ್‌ಡೆಶಾ ನೆಗೆಸ್ಸೆ, ಉಕ್ರೇನ್‌ನ ಒಲ್ಗಾ ಅಬ್ರಾಮೊವಾ ಮತ್ತು ಅರ್ತೆಮ್ ತೈಸೆಂಕೊ ಹಾಗೂ ರಷ್ಯಾದ ಐಸ್ ಡಾನ್ಸರ್ ಏಕ್ತರಿನಾ ಬೊಬ್ರೊವಾ ಅವರ ಸಾಲಿಗೆ 25 ವರ್ಷದ ಇಥಿಯೋಪಿಯಾ ಮೂಲದ ಓಟಗಾರ್ತಿ ಅಬೆಬಾ ಸೇರಿದ್ದಾರೆ.
1500 ಮೀಟರ್ಸ್ ಓಟದ ಮಾಜಿ ವಿಶ್ವ ಚಾಂಪಿಯನ್ ಕೂಡ ಆಗಿರುವ ಅಬೆಬಾರಿಂದ ಕಳೆದ ತಿಂಗಳು ಸಂಗ್ರಹಿಸಿದ್ದ ಮೂತ್ರದ ಮಾದರಿಯಲ್ಲಿ (‘ಎ’) ಮೆಲ್ಡೊನಿಯಮ್ ಔಷಧಿಯ ಅಂಶ ಪತ್ತೆಯಾಗಿತ್ತು. ಹೀಗಾಗಿ ಅವರ ಮೇಲೆ ಸ್ವೀಡನ್ ಅಥ್ಲೆಟಿಕ್ ಸಂಸ್ಥೆ ತಾತ್ಕಾಲಿಕ ನಿಷೇಧ ಹೇರಿತ್ತು. ‘ಬಿ’ ಮಾದರಿಯಲ್ಲೂ ಈ ಅಂಶ ಕಂಡು ಬಂದಿರುವುದರಿಂದ ಅವರು ಕನಿಷ್ಠ ನಾಲ್ಕು ವರ್ಷ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


