ರಾಹುಲ್ ದ್ರಾವಿಡ್ ಡೆಲ್ಲಿ ಡೇರ್ ಡೆವಿಲ್ಸ್ ಸಲಹೆಗಾರ
ಡೆಲ್ಲಿ ಡೇರ್‌ಡೆವಿಲ್ಸ್ ಫ್ರಾಂಚೈಸಿ ಭಾರತ ಜೂನಿಯರ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರನ್ನು ತಂಡದ ಸಲಹೆಗಾರ ಹಾಗೂ ಪ್ಯಾಡಿ ಉಪ್ಟನ್ ಅವರನ್ನು..

ಗುಡಗಾಂವ್: ಡೆಲ್ಲಿ ಡೇರ್‌ಡೆವಿಲ್ಸ್ ಫ್ರಾಂಚೈಸಿ ಭಾರತ ಜೂನಿಯರ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರನ್ನು ತಂಡದ ಸಲಹೆಗಾರ ಹಾಗೂ ಪ್ಯಾಡಿ ಉಪ್ಟನ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.
ದ್ರಾವಿಡ್ ಮತ್ತು ಉಪ್ಟನ್ ಅವರು ಹಿಂದಿನ ಆವೃತ್ತಿಗಳಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಸಲಹೆಗಾರ ಹಾಗೂ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇವರಿಬ್ಬರ ಮಾರ್ಗದರ್ಶನದಲ್ಲಿ ರಾಯಲ್ಸ್ ತಂಡ ಹಿಂದಿನ ಆವೃತ್ತಿಗಳಲ್ಲಿ ಅಮೋಘ ಸಾಮರ್ಥ್ಯ ತೋರಿತ್ತು.
ಹೀಗಾಗಿ ಈ ಜೋಡಿಯನ್ನು ಡೇರ್‌ಡೆವಿಲ್ಸ್ ಫ್ರಾಂಚೈಸಿ ತನ್ನತ್ತ ಸೆಳೆದುಕೊಂಡಿದೆ. ಇವರ ಜತೆಗೆ ಮುಂಬೈ ತಂಡದ ಮಾಜಿ ಆಟಗಾರ ಜುಬಿನ್ ಭರುಚಾ ಅವರನ್ನು ತಾಂತ್ರಿಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಜುಬಿನ್ ಕೂಡಾ ಹಿಂದಿನ ಆವೃತ್ತಿಗಳಲ್ಲಿ ರಾಯಲ್ಸ್ ತಂಡದಲ್ಲಿ ಕಾರ್ಯನಿರ್ವಹಿಸಿ ದ್ದರು ಎಂಬುದು ವಿಶೇಷ.ಮಾಜಿ ಆಟಗಾರರಾದ ಪ್ರವೀಣ್ ಆಮ್ರೆ, ಶ್ರೀಧರನ್ ಶ್ರೀರಾಮ್ ಮತ್ತು ಟಿ.ಎ. ಶೇಖರ್ ಅವರನ್ನು ಡೇರ್‌ಡೆವಿಲ್ಸ್ ತಂಡದ ಸಿಬ್ಬಂದಿಯಾಗಿ ಮುಂದುವರಿಸಿದೆ.
ಕಿಂಗ್ಸ್ ಇಲೆವೆನ್‌ಗೆ ಚುಲಾನಿ ನೇಮಕ(ಚಂಡೀಗಡ ವರದಿ): ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆನಂದ್ ಚುಲಾನಿ ಅವರನ್ನು ತಂಡದ ಪರ್ಫಾರ್ಮೆನ್ಸ್ ಕೋಚ್ ಆಗಿ ನೇಮಕ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


