ಕ್ರೀಡೆ

ಭಾರತಕ್ಕೆ ಕ್ಲೀನ್ ಸ್ವೀಪ್ ಗುರಿ

ರವಾಸಿ ಭಾರತ ಹಾಗೂ ಅತಿಥೇಯ ಆಸ್ಟ್ರೇಲಿಯಾ ನಡುವಣದ ಕೊನೆಯ ಪಂದ್ಯ ಭಾನುವಾರ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಧೋನಿ ಪಡೆ ಕ್ಲೀನ್ ಸ್ವೀಪ್...

ಭಾರತಕ್ಕೆ ಕ್ಲೀನ್ ಸ್ವೀಪ್ ಗುರಿ
ಇಂಡಿಯಾ
Published On :

ಸಿಡ್ನಿ: ಪ್ರವಾಸಿ ಭಾರತ ಹಾಗೂ ಅತಿಥೇಯ ಆಸ್ಟ್ರೇಲಿಯಾ ನಡುವಣದ ಕೊನೆಯ ಪಂದ್ಯ ಭಾನುವಾರ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಧೋನಿ ಪಡೆ ಕ್ಲೀನ್ ಸ್ವೀಪ್ ಗುರಿ ಹೊಂದಿದ್ದರೆ, ಈಗಾಗಲೇ ಸರಣಿಯಲ್ಲಿ ಕಳೆದುಕೊಂಡಿರುವ ಆಸ್ಟ್ರೇಲಿಯಾ, ಕೊನೆಯ ಪಂದ್ಯವನ್ನು ಗೆದ್ದು ಮಾನ ಉಳಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದೆ.

ಶುಕ್ರವಾರ ನಡೆದ ಎರಡನೇ ಚುಟುಕು ಪಂದ್ಯದಲ್ಲಿ ಭಾರತ ಆತಿಥೇಯರನ್ನು ಮಣಿಸುವ ಮೂಲಕ ಇತಿಹಾಸ ಬರೆದಿದ್ದು, ಇದೇ ಹುರುಪಿನಲ್ಲಿರುವ ಧೋನಿ ಪಡೆ ಮತ್ತೊಮ್ಮೆ ಕಾಂಗರೂಗಳಿಗೆ ದಿಗಿಲು ಹುಟ್ಟಿಸಲು ಸಜ್ಜಾಗಿದೆ.

ಭಾರೀ ಸವಾಲು: ಏಕದಿನ ಸರಣಿಯಲ್ಲಿ ಸೋತ ಬಳಿಕ ಭಾರತ ತಂಡದ ಈ ಪರಿ ತಿರುಗುಬೀಳುವಿಕೆಯನ್ನು ನಿರೀಕ್ಷಿಸದ ಆಸ್ಟ್ರೇಲಿಯಾಗೆ ಈ ಕೊನೆಯ ಪಂದ್ಯ ಭಾರೀ ಸವಾಲೊಡ್ಡಿದೆ. ಸ್ಫೋಟಕ ಆಟಗಾರರಾದ ಡೇವಿಡ್ ವಾರ್ನರ್, ಏರಾನ್ ಫಿಂಚ್ ಅಲ್ಲದೆ, ಸ್ಟೀವನ್ ಸ್ಮಿತ್ ಕೂಡ ಆ ಪಂದ್ಯಕ್ಕೆ ಅಲಭ್ಯವಾಗಿರುವುದು ತಂಡದ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ. ಕೊನೆಯ ಪಂದ್ಯದಲ್ಲಿ ಈ ಎಲ್ಲ ವೈಫಲ್ಯವನ್ನು ಮೆಟ್ಟಿನಿಲ್ಲದ ಹೊರತು ಭಾರತವನ್ನು ಮಣಿಸಲು ಆಸ್ಟ್ರೇಲಿಯಾಗೆ ಕಷ್ಟಸಾಧ್ಯವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.