ಪಾಕಿಸ್ತಾನದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಕೊಹ್ಲಿ ಕಟ್ಟಾ ಅಭಿಮಾನಿ ಬಂಧನ
ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರ ಕಟ್ಟ ಪಾಕ್ ಅಭಿಮಾನಿ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯ ಗೆದ್ದ ಸಂಭ್ರಮಕ್ಕಾಗಿ ಪಂಜಾಬ್...

ಲಾಹೋರ್: ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರ ಕಟ್ಟ ಪಾಕ್ ಅಭಿಮಾನಿ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯ ಗೆದ್ದ ಸಂಭ್ರಮಕ್ಕಾಗಿ ಪಂಜಾಬ್ ಪ್ರಾಂತ್ಯದಲ್ಲಿರುವ ತಮ್ಮ ಮನೆ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.
ಲಾಹೋರ್ ನಿಂದ 200 ಕಿ.ಮೀ ದೂರದಲ್ಲಿರುವ ಪಂಬಾಜ್ ಪ್ರಾಂತ್ಯದ ಓಕಾರ ಜಿಲ್ಲೆಯ ನಿವಾಸಿ ಉಮರ್ ದ್ರಾಸ್ ಬಂಧನಕ್ಕೆ ಗುರಿಯಾಗಿರುವ ಕೊಹ್ಲಿ ಅಭಿಮಾನಿ. ಗಣರಾಜ್ಯೋತ್ಸವ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಗೆಲುವು ಒಂದೇ ದಿನ ಬಿದ್ದರಿಂದ ಖುಷಿಯಲ್ಲಿ ತನ್ನ ಮನೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ಬಂಧನಕ್ಕೊಳಗಾಗಿದ್ದಾನೆ. ಈ ಕಾರಣಕ್ಕಾಗಿ ಉಮರ್ ದ್ರಾಸ ಮನೆಯ ಮೇಲೆ ದಾಳಿ ನಡೆಸಿರುವ ಸ್ಥಳೀಯ ಪೊಲೀಸರು, ಆತನ ಮನೆಯ ಮೇಲೆ ಹಾರುತ್ತಿದ್ದ ತ್ರಿವರ್ಣ ಧ್ವಜವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಹಮದ್ ಜಮಿಲ್ ಎಂಬ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಧ್ವಜ ಹಾರಿಸಿದ ಕಾರಣಕ್ಕೆ ಆತನ ವಿರುದ್ಧ 'ಸಾರ್ವಜನಿಕ ಆದೇಶ ನಿರ್ವಹಣೆ' ಅಡಿಯಲ್ಲಿ ಕೇಸು ದಾಖಲಿಸಲಾಗಿದ್ದು, ಅಂದೇ ಆತನನ್ನು ಕೋರ್ಟ್ ಗೆ ಹಾಜರು ಪಡೆಸಿ, ಪೊಲೀಸ್ ಕಷ್ಟಡಿಗೆ ಪಡೆಯಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


