ಆಸ್ಟ್ರೇಲಿಯಾ ಓಪನ್ ನಿಂದ ಹೊರಬಿದ್ದ ನಡಾಲ್
ಅಗ್ರ ಶ್ರೇಯಾಂಕದ ಆಟಗಾರ ರಫೆಲ್ ನಡಾಲ್ ಅವರು ಸೋಮವಾರ ವರ್ಷದ ಮೊಟ್ಟ ಮೊದಲ ಗ್ರಾಂಡ್ ಸ್ಲಾಮ್ ಪಂದ್ಯಾವಳಿ...

Published On :
ಮೊಲ್ಬೋರ್ನ್: ಅಗ್ರ ಶ್ರೇಯಾಂಕದ ಆಟಗಾರ ರಫೆಲ್ ನಡಾಲ್ ಅವರು ಸೋಮವಾರ ವರ್ಷದ ಮೊಟ್ಟ ಮೊದಲ ಗ್ರಾಂಡ್ ಸ್ಲಾಮ್ ಪಂದ್ಯಾವಳಿ ಆಸ್ಟ್ರೇಲಿಯಾ ಓಪನ್ ನಿಂದ ಹೊರಬಿದ್ದಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಮೊದಲ ಪಂದ್ಯದಲ್ಲಿ ರಫೆಲ್ ನಡಾಲ್ ತಮ್ಮದೇ ದೇಶದ ಫರ್ನಾಂಡೋ ವೆರ್ಡ್ಸ್ಕೋ ವಿರುದ್ಧ 7-6 (8-6), 4-6, 3-6, 7-6 (7-4), 6-2 ಸೆಟ್ಗಳ ಅಂತರದಿಂದ ಸೋಲ ಅನುಭವಿಸಿದ್ದಾರೆ.
4 ಗಂಟೆ 40 ನಿಮಿಷ ನಡೆದ ಹೋರಾಟದಲ್ಲಿ ನಡಾಲ್ಗೆ ಗೆಲುವು ಒಲಿಯಲಿಲ್ಲ. ನಡಾಲ್ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ನಲ್ಲಿ ಮೊದಲ ಸುತ್ತಿನಲ್ಲಿ ನಿರ್ಗಮಿಸುತ್ತಿದ್ದಾರೆ.
2009ರಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ನಡಾಲ್ 5 ಗಂಟೆ 14 ನಿಮಿಷ ನಡೆದ ಹೋರಾಟದಲ್ಲಿ ಫರ್ನಾಂಡೋ ವಿರುದ್ಧ ಗೆಲುವಿನ ನಗೆ ಬೀರಿದ್ದರು. ನಡಾಲ್ 2009ರಲ್ಲಿ ಫೆಡರರ್ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದ್ದು. ನಂತರ 2012 ಮತ್ತು 2014ರಲ್ಲಿ ರನ್ನರ್ ಅಪ್ ಆಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


