ಕ್ರೀಡೆ

ಉತ್ತರ ಪ್ರದೇಶಕ್ಕೆ ಕಳಿಂಗಾ ಸಡ್ಡು

ನೂತನ ಕೋಚ್ ಮಾರ್ಕ್ ಹ್ಯಾಗರ್ ಮಾರ್ಗದರ್ಶನದಲ್ಲಿ ಸೂಕ್ತ ತಯಾರಿ ನಡೆಸಿ, ಈ ಬಾರಿಯ ಹಾಕಿ ಇಂಡಿಯಾ ಲೀಗ್ (ಎಚ್ಐಎಲ್) ಟೂರ್ನಿಗೆ ಕಾಲಿಟ್ಟಿರುವ ಕಳಿಂಗಾ ಲ್ಯಾನ್ಸರ್ಸ್, ಈ ಬಾರಿ ತಮ್ಮ ಅದೃಷ್ಟ ರೇಖೆಯನ್ನು ತಾನೇ ಗೀಚುವ ಉತ್ಸಾಹದಲ್ಲಿದೆ...

ಉತ್ತರ ಪ್ರದೇಶಕ್ಕೆ ಕಳಿಂಗಾ ಸಡ್ಡು
ಉತ್ತರ ಪ್ರದೇಶಕ್ಕೆ ಕಳಿಂಗಾ ಸಡ್ಡು (ಸಂಗ್ರಹ ಚಿತ್ರ)
Published On :

ಭುವನೇಶ್ವರ: ನೂತನ ಕೋಚ್ ಮಾರ್ಕ್ ಹ್ಯಾಗರ್ ಮಾರ್ಗದರ್ಶನದಲ್ಲಿ ಸೂಕ್ತ ತಯಾರಿ ನಡೆಸಿ, ಈ ಬಾರಿಯ ಹಾಕಿ ಇಂಡಿಯಾ ಲೀಗ್ (ಎಚ್ಐಎಲ್) ಟೂರ್ನಿಗೆ ಕಾಲಿಟ್ಟಿರುವ ಕಳಿಂಗಾ ಲ್ಯಾನ್ಸರ್ಸ್, ಈ ಬಾರಿ  ತಮ್ಮ ಅದೃಷ್ಟ ರೇಖೆಯನ್ನು ತಾನೇ ಗೀಚುವ ಉತ್ಸಾಹದಲ್ಲಿದೆ.

ಸೋಮವಾರದಿಂದ ಆರಂಭವಾಗಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಅದು, ಉತ್ತರ ಪ್ರದೇಶ ವಿಜರ್ಡ್ಸ್ ತಂಡವನ್ನು ಎದುರಿಸಲಿದೆ. ಎಚ್ಐಎಲ್ 2014ರ ಆವೃತ್ತಿಯ ಮೂಲಕ  ಕಾಲಿಟ್ಟಿರುವ ಕಳಿಂಗಾ ಲ್ಯಾನ್ಸರ್ಸ್, ಕಳೆದೆರಡೂ ಆವೃತ್ತಿಗಳಲ್ಲಿ ಹೇಳಿಕೊಳ್ಳುವಂಥ ಸಾಧನೆಯನ್ನೇನೂ ಮಾಡಿಲ್ಲ. ಆ ಕಹಿ ಅನುಭವವನ್ನು ಆ ತಂಡದ ಮರೆಯಲತ್ನಿಸುತ್ತಿದೆ. ಇನ್ನು, ಇದಲ್ಲದೆ,  ತನ್ನ ತವರಿನಲ್ಲೇ ಕಳಿಂಗಾ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಸಾಗರದ ಮುಂದೆ ತನ್ನ ಮೊದಲ ಹಣಾಹಣಿಯನ್ನು ಎದುರಿಸುತ್ತಿರುವ ಅದು, ಜಯದ ಮೂಲಕ ಶುಭಾರಂಭ ಮಾಡುವ ತವಕದಲ್ಲಿದೆ. ಇದಲ್ಲದೆ, ಇಬ್ಬರು ದೈತ್ಯ ಕ್ರೀಡಾಳುಗಳಾದ ವಿ.ಆರ್. ರಘುನಾಥ್ (ಕಳಿಂಗಾ) ಹಾಗೂ ಮೊರಿತ್ಸ್ (ಉತ್ತರ ಪ್ರದೇಶ) ಯಾವ ರೀತಿಯಲ್ಲಿ ಸಡ್ಡು ಹೊಡೆಯಲಿದೆ ಎಂಬುದನ್ನು ಕಾದು  ನೋಡಬೇಕಿದೆ.

ಇನ್ನು, ಚೊಚ್ಚಲ ಆವೃತ್ತಿಯ ಲೀಗ್ ಹಂತದಲ್ಲಿ ತೃತೀಯ ಸ್ಥಾನ ಅಲಂಕರಿಸಿದ್ದಕ್ಕಷ್ಟೇ ಸಮಾಧಾನಪಟ್ಟಿದ್ದ ಉತ್ತರ ಪ್ರದೇಶ ವಿಜಾರ್ಡ್ ಸಹ ತನ್ನ ವೈ_ಲ್ಯವನ್ನು ಈ ಬಾರಿ ಹಿಮ್ಮೆಟ್ಟಿಸಲು  ಅವಕಾಶವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.