ಫೈನಲ್ ತಲುಪಿದ ರೇಲ್ವೇಸ್
ತೆಲಂಗಾಣ ನೀಡಿದ ಪ್ರಬಲ ಪೈಪೋಟಿಯ ಮಧ್ಯೆಯೂ ಆಕರ್ಷಕ ಪ್ರದರ್ಶನ ನೀಡಿದ ಭಾರತ ರೇಲ್ವೇಸ್ ತಂಡವು, ತೆಲಂಗಾಣ ವಿರುದ್ಧ 78-50 ಅಂತರದಲ್ಲಿ ಜಯಗಳಿಸಿ...

ಮೈಸೂರು: ತೆಲಂಗಾಣ ನೀಡಿದ ಪ್ರಬಲ ಪೈಪೋಟಿಯ ಮಧ್ಯೆಯೂ ಆಕರ್ಷಕ ಪ್ರದರ್ಶನ ನೀಡಿದ ಭಾರತ ರೇಲ್ವೇಸ್ ತಂಡವು, ತೆಲಂಗಾಣ ವಿರುದ್ಧ 78-50 ಅಂತರದಲ್ಲಿ ಜಯಗಳಿಸಿ ಫೈನಲ್ ತಲುಪಿತು. ನಗರದಲ್ಲಿ ನಡೆಯುತ್ತಿರುವ 66ನೇ ಹಿರಿಯರ ರಾಷ್ಟ್ರೀಯ ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿಯ ಸೆಮಿಫೈನಲ್‍ನ ಮಹಿಳೆಯರ ವಿಭಾಗದಲ್ಲಿ ರೈಲ್ವೇಸ್ ಪರ ಅನಿತಾ ಪೌಲ್ ದುರೈ 20, ಸೀತಾಮಣಿ ತುಡು 13 ಮತ್ತು ರಾಜ ಪ್ರಿಯಾದರ್ಶಿನಿ 12 ಅಂಕ ಗಳಿಸಿದರೆ, ತೆಲಂಗಾಣದ ಪರ ದಿವ್ಯಾ 21, ರಮ್ಯಾ 10 ಅಂಕಗಳಿಸಿದರು. ಇನ್ನು ಪುರುಷರ ವಿಭಾಗದಲ್ಲಿ ಉತ್ತರಾಖಂಡ ತಂಡ, ತಮಿಳುನಾಡು ವಿರುದ್ಧ 2 ಅಂಕಗಳ ಅಂತರದಲ್ಲಿ ರೋಚಕ ಜಯ ಪಡೆದು ಸೆಮಿ ತಲುಪಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


