ಕ್ರೀಡೆ

ಹಾರ್ದಿಕ್ ಪಾಂಡೆ ಒಂದೇ ಓವರ್ ನಲ್ಲಿ 39 ರನ್ ದಾಖಲೆ!

ಭಾರತದ ಯುವ ಆಲ್ರೌಂಡ್ ಪ್ರತಿಭೆ ಹಾರ್ದಿಕ್ ಪಾಂಡ್ಯಾ(ಅಜೇಯ 81) ಸೈಯದ್ ಮುಷ್ತಾಕ್ ಅಲಿ ಟಿ20 ಸರಣಿಯ ದೆಹಲಿ ವಿರುದ್ಧ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ...

ಹಾರ್ದಿಕ್ ಪಾಂಡೆ ಒಂದೇ ಓವರ್ ನಲ್ಲಿ 39 ರನ್ ದಾಖಲೆ!
ಹಾರ್ದಿಕ್ ಪಾಂಡ್ಯಾ
Published On :

ವಡೋದರಾ: ಭಾರತದ ಯುವ ಆಲ್ರೌಂಡ್ ಪ್ರತಿಭೆ ಹಾರ್ದಿಕ್ ಪಾಂಡ್ಯಾ(ಅಜೇಯ 81)  ಸೈಯದ್ ಮುಷ್ತಾಕ್ ಅಲಿ ಟಿ20 ಸರಣಿಯ ದೆಹಲಿ ವಿರುದ್ಧ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ಭರ್ಜರಿ 5 ಸಿಕ್ಸರ್ ಹಾಗೂ 1 ಬೌಂಡರಿ ಸೇರಿದಂತೆ ಒಟ್ಟು 39 ರನ್ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ. ಇನಿಂಗ್ಸ್ ನ 19ನೇ ಓವರ್‍ನಲ್ಲಿ ಮಧ್ಯಮ ವೇಗಿ ಆಕಾಶ್ ಸುದನ್ ಬೌಲಿಂಗ್ ವೇಳೆ ಹಾರ್ದಿಕ್, ಈ ಸಾಧನೆ ಮಾಡಿದ್ದಾರೆ. 4 ರನ್ ಬೈ ಮತ್ತು 1 ನೋಬಾಲ್ ಒಳಗೊಂಡಿದ್ದರಿಂದ 39 ರನ್ ದಾಖಲಾಯಿತು. ಆ ಮೂಲಕ ಬರೋಡಾ ತಂಡ 20 ಓವರ್ ಗಳಲ್ಲಿ 153ಕ್ಕೆ 6 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ದೆಹಲಿ ತಂಡ 5 ವಿಕೆಟ್ ಗೆ 156 ಸಂಪಾದಿಸಿ, 5 ವಿಕೆಟ್ ಜಯ ದಾಖಲಿಸಿತು. ಆ ಮೂಲಕ ಪಾಂಡ್ಯಾ ಅವರ ರೋಚಕ ಇನಿಂಗ್ಸ್ ವ್ಯರ್ಥವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.