ಕ್ರೀಡೆ

ಟಿ20 ಟೂರ್ನಿ: 2ನೇ ಪಂದ್ಯದಲ್ಲಿ ಲಂಕಾಕ್ಕೆ ಸೋಲು, ನ್ಯೂಜಿಲೆಂಡ್ ಮಡಿಲಿಗೆ ಸರಣಿ

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನು ನ್ಯೂಜಿಲೆಂಡ್ 2-0 ಅಂತರದಿಂದ ಗೆದ್ದುಕೊಂಡಿದೆ.

ಟಿ20 ಟೂರ್ನಿ: 2ನೇ ಪಂದ್ಯದಲ್ಲಿ ಲಂಕಾಕ್ಕೆ ಸೋಲು, ನ್ಯೂಜಿಲೆಂಡ್ ಮಡಿಲಿಗೆ ಸರಣಿ
ನ್ಯೂಜಿಲೆಂಡ್(ಸಂಗ್ರಹ ಚಿತ್ರ)
Published On :

ಆಕ್ಲೆಂಡ್: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನು ನ್ಯೂಜಿಲೆಂಡ್ 2-0 ಅಂತರದಿಂದ ಗೆದ್ದುಕೊಂಡಿದೆ. ಭಾನುವಾರ ನಡೆದ 2ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‍ಗಳಲ್ಲಿ 8 ವಿಕೆಟ್‍ಗೆ 142 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಕೇವಲ 10 ಓವರ್‍ಗಳಲ್ಲಿ 1 ವಿಕೆಟ್ ಗೆ 147 ರನ್ ದಾಖಲಿಸಿ ಗೆಲವು ಪಡೆಯಿತು.

ಎರಡು ದಾಖಲೆ:
ಶ್ರೀಲಂಕಾ ವಿರುದ್ಧ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಮಟ್ಟಿಗೆ ಎರಡು ದಾಖಲೆಗಳು ಮೂಡಿಬಂದಿದ್ದು ವಿಶೇಷ. ಆರಂಭಿಕರಾಗಿ ಕಣಕ್ಕಿಳಿದಿದ್ದ ಗುಪ್ಟಿಲ್ ಒಟ್ಟು 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಗುಪ್ಟಿಲ್, ಟಿ20ಯಲ್ಲಿ ವೇಗದ ಅರ್ಧಶತಕಗಳಿಸಿದ ನ್ಯೂಜಿಲೆಂಡ್‍ನ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಆದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮುನ್ರೊ, 14 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಗುಪ್ಟಿಲ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು!

ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ 20 ಓವರ್‍ಗಳಲ್ಲಿ 8 ವಿಕೆಟ್‍ಗೆ 142 (ಮ್ಯಾಥ್ಯೂಸ್ 81, ದಿಲ್ಷಾನ್ 28, ಎಲಿಯಟ್ 22ಕ್ಕೆ 4) ನ್ಯೂಜಿಲೆಂಡ್ 10 ಓವರ್ ಗಳಲ್ಲಿ 1 ವಿಕೆಟ್‍ಗೆ 147 (ಗುಪ್ಟಿಲ್ 63, ಮುನ್ರೊ ಅಜೇಯ 50, ತಿಸಾರ 26ಕ್ಕೆ 1)

ಪಂದ್ಯಶ್ರೇಷ್ಠ:
ಕೊಲಿನ್ ಮುನೊ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.