ರಾಹುಲ್ ದ್ರಾವಿಡ್ ಗೆ 43ನೇ ಹುಟ್ಟುಹಬ್ಬದ ಸಂಭ್ರಮ
ಒಂದೂವರೆ ದಶಕಗಳ ಹಿಂದೆ ಅಂದರೆ 1990-2000ದ ಹೊತ್ತಿಗೆ ಭಾರತದ ಕ್ರಿಕೆಟ್ ತಂಡದ ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್...

ಬೆಂಗಳೂರು: ಒಂದೂವರೆ ದಶಕಗಳ ಹಿಂದೆ ಅಂದರೆ 1990-2000ದ ಹೊತ್ತಿಗೆ ಭಾರತದ ಕ್ರಿಕೆಟ್ ತಂಡದ ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಪ್ರಮುಖ ಆಟಗಾರರಾಗಿದ್ದರು. ಇವರೆಲ್ಲರೂ ತಮ್ಮ ಆಕ್ರಮಣಕಾರಿ ಶೈಲಿಯ ಆಟಕ್ಕೆ ಹೆಸರಾದವರು, ಆದರೆ ಇವರಲ್ಲಿ ಒಬ್ಬರು ಮಾತ್ರ ಪ್ರತ್ಯೇಕವಾಗಿ ನಿಲ್ಲುತ್ತಾರೆ, ರಾಹುಲ್ ದ್ರಾವಿಡ್.
ತಮ್ಮ ಆಕ್ರಮಣರಹಿತ ಆಟವಿಲ್ಲದೆ ಕೌಶಲ್ಯ, ತಾಳ್ಮೆ ಮತ್ತು ಕಾರ್ಯವಿಧಾನಗಳಿಂದಲೇ ಆಟವಾಡಿದವರು. ಉಳಿದ ಆಟಗಾರರು ಪ್ರದರ್ಶನ ನೀಡುವಲ್ಲಿ ಸೋತಾಗ ದ್ರಾವಿಡ್ ತಮ್ಮ ತಂಡವನ್ನು ಮುನ್ನಡೆಸುತ್ತಿದ್ದರು.
ಮಧ್ಯಪ್ರದೇಶದ ಇಂಧೋರ್ ಜಿಲ್ಲೆಯಲ್ಲಿ ಜನವರಿ 11, 1973ರಲ್ಲಿ ಜನಿಸಿದ ರಾಹುಲ್ ದ್ರಾವಿಡ್ ತಮ್ಮ ಮೊದಲ ಟೆಸ್ಟ್ ಕ್ರಿಕೆಟ್ ನ್ನು 23ನೇ ವರ್ಷದಲ್ಲಿ ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ಆಡಿದರು. ಸೌರವ್ ಗಂಗೂಲಿಯವರಿಗೆ ಸಹ ಇದು ಚೊಚ್ಚಲ ಟೆಸ್ಟ್ ಮ್ಯಾಚ್ ಆಗಿತ್ತು. ಇಲ್ಲಿ ಗಂಗೂಲಿಯವರು ಉತ್ತಮ ಆಟ ಪ್ರದರ್ಶಿಸಿದ್ದರು. ಆದರೆ ದ್ರಾವಿಡ್ ಅವರ 95 ರನ್ ಗಳ ಜೊತೆಯಾಟವನ್ನು ಇಲ್ಲಿ ಹೇಳದಿದ್ದರೆ ತಪ್ಪಾಗುತ್ತದೆ. ಆ ಬಳಿಕ ರಾಹುಲ್ ದ್ರಾವಿಡ್ 164 ಟೆಸ್ಟ್ ಗಳಲ್ಲಿ 13 ಸಾವಿರದ 288 ರನ್, 344 ಏಕದಿನ ಪಂದ್ಯಗಳಲ್ಲಿ 10 ಸಾವಿರದ 889 ರನ್ ಮತ್ತು ಒಂದು ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 31 ರನ್ ಗಳಿಸಿದ್ದಾರೆ.
2ಸಾವಿರನೇ ಇಸವಿಯಲ್ಲಿ ಅವರಿಗೆ ಅಲ್ಮನಕ್ ನ ವಿಸ್ಡನ್ ಕ್ರಿಕೆಟರ್ಸ್ ಅಸೋಸಿಯೇಷನ್ ನಿಂದ ಐವರು ಉತ್ತಮ ಆಟಗಾರರಲ್ಲಿ ಒಬ್ಬರಾಗಿ ಆಯ್ಕೆ, 2004ರಲ್ಲಿ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಹಾಗೂ ವರ್ಷದ ಆಟಗಾರ ಪ್ರಶಸ್ತಿ ಕೂಡ ಒದಗಿ ಬಂದಿತ್ತು.
ಕ್ರಿಕೆಟ್ ಲೋಕದಲ್ಲಿ ವಿಭಿನ್ನ ಪ್ರಯಾಣ ಮಾಡಿರುವ ರಾಹುಲ್ ದ್ರಾವಿಡ್ ಒಂದೂವರೆ ದಶಕಕ್ಕೂ ಅಧಿಕ ಕಾಲ ಕ್ರಿಕೆಟ್ ಲೋಕವನ್ನ ಆಳಿದ ದಿ ವಾಲ್, ಹಲವು ಏಳು-ಬೀಳುಗಳನ್ನ ಕಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರ ಜೀವನ ಸಾಕಷ್ಟು ಬದಲಾಗಿದೆ. ಉತ್ತಮ ಬ್ಯಾಟ್ಸ್ ಮೆನ್ ಎಂದು ಹೆಸರಾಗಿರುವ ರಾಹುಲ್ ದ್ರಾವಿಡ್ ಒಳ್ಳೆಯ ಫೀಲ್ಡರ್ ಕೂಡ ಹೌದು. ಅವರಿಂದು 43ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


