64ನೇ ರಾಷ್ಟ್ರೀಯ ವಾಲಿಬಾಲ್ ಟೂರ್ನಿ: ಭಾರತೀಯ ರೈಲ್ವೇಸ್ ಗೆ ಡಬಲ್ ಪ್ರಶಸ್ತಿ
ಭಾನುವಾರ ಮುಕ್ತಾಯಗೊಂಡ 64ನೇ ಹಿರಿಯರ ರಾಷ್ಟ್ರೀಯ ವಾಲಿಬಾಲ್ ಟೂರ್ನಿಯಲ್ಲಿ, ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಬೆಂಗಳೂರು: ರಾಷ್ಟ್ರೀಯ ವಾಲಿಬಾಲ್ ಇತಿಹಾಸದಲ್ಲಿ ತನ್ನದೇ ಆದ ಪ್ರಾಬಲ್ಯ ಮೆರೆದ ದಾಖಲೆ ಹೊಂದಿರುವ ರೈಲ್ವೇಸ್, ಭಾನುವಾರ ಮುಕ್ತಾಯಗೊಂಡ 64ನೇ ಹಿರಿಯರ ರಾಷ್ಟ್ರೀಯ ವಾಲಿಬಾಲ್ ಟೂರ್ನಿಯಲ್ಲಿ, ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಈ ಎರಡೂ ವಿಭಾಗಗಳಲ್ಲಿ ರೈಲ್ವೇಸ್‍ಗೆ ಕೇರಳ ತಂಡವೇ ಎದುರಾಳಿಯಾಗಿದ್ದು ವಿಶೇಷ. ಮೊದಲು ನಡೆದ ಮಹಿಳೆಯರ ಫೈನಲ್ ಪಂದ್ಯದಲ್ಲಿ ರೈಲ್ವೇಸ್ ತಂಡ, 3-1 ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿದರೆ, ಆನಂತರ ನಡೆದ ಪುರುಷರ ವಿಭಾಗದ ಫೈನಲ್ ನಲ್ಲಿ 3-೨ ಅಂತರದಲ್ಲಿ ಗೆಲವು ಪಡೆದ ರೈಲ್ವೇಸ್ ಚಿನ್ನದ ಪದಕಕ್ಕೆ ಭಾಜನವಾಯಿತು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯಗಳಲ್ಲಿ ಮೊದಲು ನಡೆದ ಹಣಾಹಣಿಯಲ್ಲಿ ಕೇರಳ ಮಹಿಳೆಯರ ವಿರುದ್ಧ ಸೆಣಸಿದ ರೈಲ್ವೇಸ್ ತಂಡ, ಪಂದ್ಯದ ಆರಂಭದಿಂದಲೇ ಪಾರಮ್ಯ ಮೆರೆಯಿತು. ಆರಂಭಿಕ ಸೆಟ್ ನಲ್ಲೇ 19-25 ಅಂಕಗಳ ವ್ಯತ್ಯಾಸದಲ್ಲಿ ಸೋಲು ಕಂಡ ರೈಲ್ವೇಸ್, ದ್ವಿತೀಯ ಸೆಟ್ ನಲ್ಲಿ 25-16 ಅಂಕಗಳ ಗೆಲವು ದಾಖಲಿಸುವ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡ ರೈಲ್ವೇಸ್, ನಂತರ ತಿರುಗಿ ನೋಡಲೇ ಇಲ್ಲ. ಮೂರನೇ ಸೆಟ್ ನಲ್ಲಿ 25-20 ಅಂಕ-ಗಳ ಮೂಲಕ ಗೆಲವು ಪಡೆದ ರೈಲ್ವೇಸ್ ನಾಲ್ಕನೇ ಸೆಟ್-ನಲ್ಲೂ 25-21 ಅಂತರದಲ್ಲಿ ಗೆಲವು ಸಾಧಿಸುವ ಮೂಲಕ 3-1 ಸೆಟ್ ಗಳ ಅಂತರದಲ್ಲಿ ಜಯಿಸಿ ಚಿನ್ನದ ಪದಕ ಗೌರವಕ್ಕೆ ಭಾಜನವಾಯಿತು.
ತಮಿಳುನಾಡು ತಂಡಗಳಿಗೆ ಕಂಚು: ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ನಡೆದ ಕಂಚಿನ ಪದಕ ಸುತ್ತಿನ ಪಂದ್ಯ-ಗ-ಳಲ್ಲಿ ತಮಿ-ಳು-ನಾಡು ಆಟಗಾರರು ಗೆಲವು ಸಾಧಿಸಿದರು. ಪುರುಷರ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ತಮಿಳುನಾಡು ತಂಡ, ಪಂಜಾಬ್ ತಂಡವನ್ನು 3-1 ಸೆಟ್ ಗಳ ಅಂತರದಿಂದ ಮಣಿಸಿತು. ಮೊದಲ ಸೆಟ್ ನಲ್ಲಿ 25-15 ಅಂಕಗಳ ಅಂತರದಲ್ಲಿ ಜಯ ಸಾಧಿಸಿದ ತಮಿಳುನಾಡು, ಆನಂತರದ ಸೆಟ್ ನಲ್ಲೂ 25-16 ಅಂತರದ ಜಯ ಕಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


