ಕೇರಳ, ರೇಲ್ವೇಸ್ ಫೈನಲ್ ಗೆ
ಕೇರಳ ತಂಡ, ಪಂಜಾಬ್ ವಿರುದ್ಧ 3-2 ಸೆಟ್‍ಗಳ ರೋಚಕ ಗೆಲುವಿನೊಂದಿಗೆ 64 ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ನ ಫೈನಲ್ ಗೆ ಲಗ್ಗೆ ಹಾಕಿದೆ.

ಬೆಂಗಳೂರು: ತೀವ್ರ ತುರುಸಿನಿಂದ ಕೂಡಿದ್ದ ಪಂದ್ಯದಲ್ಲಿ ಮತ್ತೊಮ್ಮೆ ಛಲದ ಹೋರಾಟ ನಡೆಸಿದ ಕೇರಳ ತಂಡ, ಪಂಜಾಬ್ ವಿರುದ್ಧ 3-2 ಸೆಟ್‍ಗಳ ರೋಚಕ ಗೆಲುವಿನೊಂದಿಗೆ 64 ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ನ ಫೈನಲ್ ಗೆ ಲಗ್ಗೆ ಹಾಕಿದರೆ , ಮತ್ತೊಂದು ಪಂದ್ಯದಲ್ಲಿ ತಮಿಳುನಾಡಿನ ಸವಾಲನ್ನು 3 -0 ಸೆಟ್ ಗಳಿಂದ ಮೆಟ್ಟಿನಿಂತ ರೈಲ್ವೇಸ್ ಪ್ರಶಸ್ತಿ ಸುತ್ತಿಗೆ ಧಾವಿಸಿತು.
ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಸೆಮಿ ಫೈನಲ್ ಪಂದ್ಯವು ಅತ್ಯಂತ ರೋಚಕ ತಿರುವು ಕಂಡು ಅಂತಿಮವಾಗಿ ಕೇರಳ 19 -25 , 23-25, 28-26, 25-18, 15-13 ರಿಂದ ವಿಜಯದ ಕೇಕೆ ಹಾಕಿತು. 123 ನಿಮಿಷಗಳ ಕಾಲ ನಡೆದ ಸುದೀರ್ಘ ಸೆಣೆಸಾಟದಲ್ಲಿ ಮೊದಲ ಸೆಟ್ ನ್ನು ಕಳೆದುಕೊಂಡರೂ, ಆ ಬಳಿಕ ತಿರುಗಿಬಿದ್ದ ಪರಿಗೆ ಪಂಜಾಬ್ ಆಟಗಾರರು ಮಣಿಯಲೇಬೇಕಾಯಿತು. ಇತ್ತ ಪಶ್ಚಿಮ ಬಂಗಾಳ ವಿರುದ್ಧ ರೈಲ್ವೇಸ್ 3 -0 ಯಿಂದ ಜಯಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


