ಐ-ಲೀಗ್ ಫುಟ್ಬಾಲ್: ಬೆಂಗಳೂರು ಎಫ್ ಸಿ ಶುಭಾರಂಭ
ಬೆಂಗಳೂರು ಫುಟ್ಬಾಲ್ ಕ್ಲಬ್(ಬಿಎಫ್ ಸಿ) ಪ್ರತಿಷ್ಠಿತ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿತು.

ಮಾರ್ಗೋವಾ: ದ್ವಿತೀಯಾರ್ಧದಲ್ಲಿ ನಾಯಕ ಸುನಿಲ್ ಛೇಟ್ರಿ ದಾಖಲಿಸಿದ ಸೊಗಸಾದ ಗೋಲಿನ ನೆರವಿನೊಂದಿಗೆ ಬೆಂಗಳೂರು ಫುಟ್ಬಾಲ್ ಕ್ಲಬ್(ಬಿಎಫ್ ಸಿ) ಪ್ರತಿಷ್ಠಿತ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿತು.
ಇಲ್ಲಿನ ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ನಡೆದ ಈ ಋತುವಿನ ಐ-ಲೀಗ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಸಲ್ಗಾಂವ್ ಕರ್ ತಂಡವನ್ನು 2 -1 ಗೋಲುಗಳಿಂದ ಮಣಿಸಿ ಪೂರ್ಣ ಮೂರಂಕವನ್ನು ತನ್ನದಾಗಿಸಿಕೊಂಡಿತಲ್ಲದೇ, ಸಲ್ಗಾಂವ್ ಕರ್ ವಿರುದ್ಧದ ತನ್ನ ಅಜೇಯ ಓಟವನ್ನು ಮುಂದುವರೆಸಿತು.
ಅಂದಹಾಗೆ ಬಿಎಫ್ ಸಿ ಪರ ಸಿ.ವಿನೀತ್ ಪಂದ್ಯದ 5 ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ದ್ವಿತಿಯಾರ್ಧದ 61 ನೇ ನಿಮಿಷದಲ್ಲಿ ಛೆಟ್ರಿ ತಂಡಕ್ಕೆ ಆಸರೆಯಾದರು. ಸಲ್ಗಾಂ ವ್ಕರ್ ಪರ ಡರಿಲ್ 41ನೇ ನಿಮಿಷ ಎದಲ್ಲಿ ಪೆನಾಲ್ಟಿ ಗೋಲು ಹೊಡೆದರು. ಇನ್ನು ಪಂದ್ಯ ಶುರುವಾದ ಕ್ಷಣಾರ್ಧದಿಂದಲೇ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಬಿಎಫ್ ಸಿ ಆಟಗಾರರು ಸಾಲ್ಗಾಂವ್ ಕರ್ ವಿರುದ್ಧ ಜಯ ಸಾಧಿಸಿದರು. ಈ ಪಂದ್ಯದಲ್ಲಿ ಬೆಂಗಳೂರು ತಂಡದ ನಾಯಕ ಸುನಿಲ್ ಛೆಟ್ರಿ, ತಮ್ಮ ಐ ಲೀಗ್ ವೃತ್ತಿಜೀವನದಲ್ಲೆ ಮೊಟ್ಟ ಮೊದಲ ಫ್ರೀ ಕಿಕ್ ಗೋಲ್ ಗಳಿಸಿದ ಸಾಧನೆ ಮಾಡಿದರು. 61 ನೇ ನಿಮಿಷದಲ್ಲಿ ಕಿಮ್ ಒದ್ದ ಚೆಂಡು ಗುರ್ಜಿಂದರ್ ಸಿಂಗ್ ಕೈ ತಾಗಿದಾಗ, ರೆಫರಿ ಸೂಚನೆಯಂತೆ ಫ್ರೀ ಕಿಕ್ ಅವಕಾಶ ಪಡೆದ ಛೆಟ್ರಿ ಗೋಲು ದಾಖಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


