ಕ್ರೀಡೆ

ಫಿಫಾ ಸಹಾಯಕ ರೆಫರಿಯಾಗಿ ಟೋನಿ

ಭಾರತದ ರಾಷ್ಟ್ರೀಯ ಫುಟ್ಬಾಲ್ ರೆಫರಿಯಾಗಿರುವ ಜೆ. ಟೋನಿ ಅವರನ್ನು ಫಿಫಾ ಸಹಾಯಕ ರೆಫರಿಯನ್ನಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಕಳೆದ 10 ವರ್ಷಗಳಿಂದ...

ಫಿಫಾ ಸಹಾಯಕ ರೆಫರಿಯಾಗಿ ಟೋನಿ
ಫಿಫಾ ಪುಟ್ಬಾಲ್
Published On :

ಬೆಂಗಳೂರು: ಭಾರತದ ರಾಷ್ಟ್ರೀಯ ಫುಟ್ಬಾಲ್ ರೆಫರಿಯಾಗಿರುವ ಜೆ. ಟೋನಿ ಅವರನ್ನು ಫಿಫಾ ಸಹಾಯಕ ರೆಫರಿಯನ್ನಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಕಳೆದ 10 ವರ್ಷಗಳಿಂದ ಕರ್ನಾಟಕದಿಂದ ಯಾವುದೇ ರೆಫರಿ ಫಿಫಾ ಮಟ್ಟದಲ್ಲಿ ಕಾರ್ಯನಿರ್ವಹಿಸದ ಕೊರಗನ್ನು ನೀಗಿಸಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕದ ಬಾಲಸುಬ್ರಮಣ್ಯಂ ಅವರ ಜತೆ ಟೋನಿ ಐಎಸ್ಎಲ್ ಟೂರ್ನಿಯಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದ್ದರು. ಜ.1, 2016ರಿಂದ ಟೋನಿ ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲಾಗಿದೆ. ಟೋನಿ ಸಾಧನೆಗೆ ರೆಫರಿ ಸಮಿತಿ ಮುಖ್ಯಸ್ಥ ಎಂ.ಎಸ್. ಕೃಷ್ಣ ಮೂರ್ತಿ, ಕೆಎಸ್‍ಎಫ್ಎ ಅಧ್ಯಕ್ಷ ಎ.ಆರ್. ಖಲೀಲ್, ಬಿಡಿಎಫ್ಎ ಅಧ್ಯಕ್ಷ ಎಂ.ಪಿ. ಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.