ಕ್ರೀಡೆ

ನಾಯಕ ವಿರಾಟ್ ಕೊಹ್ಲಿಗೆ ಬಿಸಿಸಿಐ ಲಕ್ಷ್ಮೀ ಕಟಾಕ್ಷ!

ಪ್ರತಿಷ್ಠಿತ ಇಂಡಿಯನ್ ಸೂಪರ್ ಲೀಗ್ ಆಟಗಾರರ ಸಂಭಾವನೆ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ....

ನಾಯಕ ವಿರಾಟ್ ಕೊಹ್ಲಿಗೆ ಬಿಸಿಸಿಐ ಲಕ್ಷ್ಮೀ ಕಟಾಕ್ಷ!
ವಿರಾಟ್ ಕೊಹ್ಲಿ
Published On :

ನವದೆಹಲಿ: ಪ್ರತಿಷ್ಠಿತ ಇಂಡಿಯನ್ ಸೂಪರ್ ಲೀಗ್ ಆಟಗಾರರ ಸಂಭಾವನೆ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೆಚ್ಚು ವೇತನ ಪಡೆಯುತ್ತಿರುವ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.

ಬಿಸಿಸಿಐ ನಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ  ಶುಕ್ರವಾರ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 2010 ರಲ್ಲಿ ಫ್ರಾಂಚೈಸಿಗಳು  ಆಟಗಾರರನ್ನು ಉಳಿಸಿಕೊಳ್ಳುವ ವ್ಯವಸ್ಥೆ ನಿರ್ಮಿಸಿದ ನಂತರ ಮೊದಲ ಬಾರಿಗೆ ಉಳಿಕೆ ಆಟಗಾರರ ನಿಜವಾದ ಮೊತ್ತವನ್ನು ಪ್ರಕಟಿಸಲಾಗಿದೆ.

ವಿರಾಟ್ ಕೊಹ್ಲಿ ರು. 15 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಇನ್ನು ಆರ್ ಸಿಬಿ ತಂಡದ ಆಟಗಾರರ ಆಯ್ಕೆಯ ಮೊತ್ತದಲ್ಲಿ ರು. 12.5 ಕೋಟಿ ಕಡಿಮೆ ಮಾಡಲಾಗಿದೆ. ಉಳಿದ ಭಾರತೀಯ ಆಟಗಾರರ ಪೈಕಿ ಹರ್ಭಜನ್ ಸಿಂಗ್ ರು.5.50 ಕೋಟಿಯಿಂದ 8 ಕೋಟಿಗೆ ಅಂಬಟಿ ರಾಯುಡು, ತಮ್ಮ ವೇತನದಲ್ಲಿ ಬಡ್ತಿ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.