ಕ್ರೀಡೆ

ಒಲಿಂಪಿಕ್ಸ್ ಗೆ ಅರ್ಹತೆ: ಅತ್ರಿ ವಿಶ್ವಾಸ

ಇದೇ ವರ್ಷ ಆಗಸ್ಟ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್‍ನ ಪುರುಷರ ಡಬಲ್ಸ್ ವಿಭಾಗದಲ್ಲಿ ಅರ್ಹತೆ ಪಡೆಯುವುದಾಗಿ ಭಾರತದ...

ಒಲಿಂಪಿಕ್ಸ್ ಗೆ ಅರ್ಹತೆ: ಅತ್ರಿ ವಿಶ್ವಾಸ
ಮನು ಅತ್ರಿ
Published On :

ಮುಂಬೈ: ಇದೇ ವರ್ಷ ಆಗಸ್ಟ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್‍ನ ಪುರುಷರ ಡಬಲ್ಸ್ ವಿಭಾಗದಲ್ಲಿ ಅರ್ಹತೆ ಪಡೆಯುವುದಾಗಿ ಭಾರತದ ಆಟಗಾರ ಮನು ಅತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ವಿಶ್ವ ರ್ಯಾಂಕಿಂಗ್‍ನಲ್ಲಿ 17ನೇ ಸ್ಥಾನದಲ್ಲಿರುವ ಅತ್ರಿ, ತಮ್ಮ ಜತೆಗಾರ ಸುಮೀತ್ ರೆಡ್ಡಿ ಅವರೊಂದಿಗೆ ಆಗಸ್ಟ್ 15ರಿಂದ 21ರವರೆಗೆ ನಡೆಯಲಿರುವ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲಿದ್ದೇವೆ ಎಂದಿದ್ದಾರೆ. ``ವಿಶ್ವ ಪುರುಷರ ಡಬಲ್ಸ್ ರ್ಯಾಂಕಿಂಗ್ ನಲ್ಲಿ 17ನೇ ಸ್ಥಾನದಲ್ಲಿದ್ದೇವೆ. ಅಗ್ರ 13ರಲ್ಲಿ ಸ್ಥಾನ ಪಡೆಯಲಿರು ಜೋಡಿ ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯಲಿದೆ.

ಇನ್ನು ಒಲಿಂಪಿಕ್ಸ್ ರ್ಯಾಂಕಿಂಗ್‍ನಲ್ಲಿ ನಾವು 9ನೇ ಸ್ಥಾನದಲ್ಲಿದ್ದೇವೆ. ಆ ಮೂಲಕ ನಾವು ಈ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುತ್ತೇವೆ ಎಂದು ಅತ್ರಿ ತಿಳಿಸಿದ್ದಾರೆ. ಶನಿವಾರದಿಂದ ಆರಂಭವಾಗಲಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯಲ್ಲಿ ಮುಂಬೈ ರಾಕೆಟ್ಸ್ ಪರ ಆಡಲಿರುವ ಅತ್ರಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.