ಕ್ರೀಡೆ

ಸೈನಿಕರಿಗೆ ಗೌರವ ಸಲ್ಲಿಸಿ ಧೋನಿ ಟ್ವೀಟ್

ಜೆಎನ್‌ಯು ವಿವಾದಕ್ಕೆ ಸಂಬಂಧಪಟ್ಟಂತೆ ದೇಶಪ್ರೇಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದೇಶದ ಜನರ ಒಂದೊಂದು ನಿಲುವುಗಳು ಚರ್ಚಾಸ್ಪದವಾಗುತ್ತಲೇ...

ಸೈನಿಕರಿಗೆ ಗೌರವ ಸಲ್ಲಿಸಿ ಧೋನಿ ಟ್ವೀಟ್
ಮಹೇಂದ್ರ ಸಿಂಗ್ ಧೋನಿ
Published On :
ನವದೆಹಲಿ:  ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ದೇಶಪ್ರೇಮದ ಬಗ್ಗೆಯೇ ಚರ್ಚೆಯಾಗುತ್ತಿರುವ ಈ ಹೊತ್ತಿನಲ್ಲಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತೀಯ ಸೇನೆಗೆ ಗೌರವ ಸಲ್ಲಿಸಿ ಶನಿವಾರ ಟ್ವೀಟ್ ಮಾಡಿದ್ದಾರೆ.
ಜೆಎನ್‌ಯು ವಿವಾದಕ್ಕೆ ಸಂಬಂಧಪಟ್ಟಂತೆ ದೇಶಪ್ರೇಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದೇಶದ ಜನರ ಒಂದೊಂದು ನಿಲುವುಗಳು ಚರ್ಚಾಸ್ಪದವಾಗುತ್ತಲೇ ಇರುತ್ತವೆ. ಈ ಹಿಂದೆ ಗೌತಂ ಗಂಭೀರ್, ಕುಸ್ತಿಪಟು ಯೋಗೇಶ್ವರ್ ದತ್ತಾ ಮತ್ತು ಬಾಕ್ಸರ್ ವಿಜೇಂದರ್ ಸಿಂಗ್ ಅವರು ದೇಶಪ್ರೇಮವನ್ನು ವ್ಯಕ್ತ ಪಡಿಸಿ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದರು.
ಇದೀಗ ಧೋನಿ, ಸ್ಪೆಷಲ್ ಫೋರ್ಸ್ ಮತ್ತು ಕಮಾಂಡೋಗಳು ನಮ್ಮ ನಿಮ್ಮಂತಿರುವ ಮನುಷ್ಯರೇ ಆಗಿದ್ದು, ದೇಶ ಮೊದಲು ಎಂದು ಹೇಳಿ ಅವರು ಸೇವೆಗೈಯ್ಯುತ್ತಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಾವು ಚರ್ಚೆ ಮಾಡುತ್ತಿರುವ ಈ ಹೊತ್ತಿನಲ್ಲಿ ನಮ್ಮ ಸೈನಿಕರು ನಾವು ಸುರಕ್ಷಿತರಾಗಿರುವಂತೆ ಕಾಪಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ.
ಟೀಂ ಇಂಡಿಯಾ ನಾಯಕ ಧೋನಿ, ಭಾರತೀಯ ಗಡಿ ರಕ್ಷಣಾ ಪಡೆಯಲ್ಲಿ ಲೆಫ್ಟೆನೆಂಟ್ ಕರ್ನಲ್‌ನ ಗೌರವ ಪದವಿಯನ್ನು ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.