ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ ವನಿತೆಯರ ತಂಡ
ಶ್ರೀಲಂಕಾ ವಿರುದ್ಧದ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ 7 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದ್ದು, 3-0 ಅಂತರದಲ್ಲಿ ಕ್ಲೀನ್...

ರಾಂಚಿ: ಶ್ರೀಲಂಕಾ ವಿರುದ್ಧದ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ 7 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದ್ದು, 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 113 ರನ್ ಗಳ ಗುರಿ ಪಡೆದ ಮಿಥಾಲಿ ಬಳಗ 29.3 ಓವರ್ ಗಳಲ್ಲಿಯೇ 3 ವಿಕೆಟ್ ನಷ್ಟಕ್ಕೆ 114 ರನ್ ಪೇರಿಸಿ ಜಯಶಾಲಿಯಾಯಿತು.
ಭಾರತ ಪರ ಆರಂಭಿಕವಾಗಿ ಬ್ಯಾಟ್ ಮಾಡಿದ ಪೂನಮ್ ರಾವುತ್ 0, ಸ್ಮೃತಿ ಮಂದಾನ 6, ಬೇಗನೆ ಔಟಾದರು ಬಳಿಕ ಬಂದ ವೇದಾ ಕೃಷ್ಣಮೂರ್ತಿ 90 ಎಸೆತಗಳಲ್ಲಿ 61 ರನ್ ಗಳಿಸಿ ಭಾರತದ ಗೆಲುವಿಗೆ ಪ್ರಮುಖ ಕಾರಣಕರ್ತರಾದರು. ದೀಪ್ತಿ ಶರ್ಮಾ 28 ರನ್ ಗಳಿಸಿ ಔಟಾದರೆ, ನಂತರ ಬಂದ ಶಿಖಾ ಪಾಂಡೆ 8 ರನ್ ಗಳಿಸಿ ಅಜೇಯರಾಗಿ ಉಳಿದರು.
ಶ್ರೀಲಂಕಾ: 38.2 ಓವರ್ ಗಳಲ್ಲಿ 112 (ಸುರಂಗಿಕಾ 23, ಪ್ರಸಾದನಿ ವೀಕ್ಕೋಡಿ 19, ದೀಪ್ತಿ ಶರ್ಮ 20ಕ್ಕೆ 6, ಪ್ರೀತಿ ಬೋಸ್ 8ಕ್ಕೆ 2, ಶಿಖಾ ಪಾಂಡೆ 24ಕ್ಕೆ 2,)
ಭಾರತ: 29.3 ಓವರ್ ಗಳಲ್ಲಿ 3 ವಿಕೆಟ್ ಗೆ 114 (ವೇದಾ ಅಜೇಯ 61, ದೀಪ್ತಿ ಶರ್ಮ 28, ಸುಂಗಂಧಿಕಾ 18ಕ್ಕೆ 1)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


