ಕ್ರೀಡೆ

ಲಂಕಾ ವಿರುದ್ಧ ಟಿ20 ಸರಣಿ ಭಾರತದ ಕೈವಶ

ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಮಾರಕ ಬೌಲಿಂಗ್ ಪರಿಣಾಮ ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸುವ ಮೂಲಕ ಟಿ20 ಸರಣಿಯನ್ನು..

ಲಂಕಾ ವಿರುದ್ಧ ಟಿ20 ಸರಣಿ ಭಾರತದ ಕೈವಶ
ಭಾರತ-ಶ್ರೀಲಂಕಾ ನಡುವಿನ ಪಂದ್ಯ
Published On :

ವಿಶಾಖಪಟ್ಟಣ: ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಮಾರಕ ಬೌಲಿಂಗ್ ಪರಿಣಾಮ ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ ಗೆಲುವು  ಸಾಧಿಸುವ ಮೂಲಕ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪಡೆ ಕೇವಲ 82 ರನ್‍ಗೆ ಆಲೌಟ್ ಆಯಿತು. ಕೇವಲ 8ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಅಶ್ವಿನ್ ಲಂಕಾಗೆ  ಚೇತರಿಸಿಕೊಳ್ಳಲಾಗದ ಹೊಡೆತ ನೀಡಿದರು. ಅಂತೆಯೇ ತಮ್ಮದೇ ದಾಖಲೆಯನ್ನು ಅಶ್ವಿನ್ ಮುರಿದರು. ಆ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದರು. ಈ ಮುನ್ನ 2014ರಲ್ಲಿ ಆಸ್ಟ್ರೇಲಿಯಾ  ವಿರುದ್ಧ 11ರನ್‍ಗೆ 4 ವಿಕೆಟ್ ಕಬಳಿಸಿದ್ದರು. ಲಂಕಾ ತಂಡದ ನಾಯಕ ಸೇರಿದಂತೆ ಯಾವೊಬ್ಬ ಆಟಗಾರನೂ ಕೂಡ ಭಾರತೀಯ ಬೌಲರ್ ಗಳ ವಿರುದ್ಧ ತಿರುಗಿ ಬೀಳುವ ಪ್ರಯತ್ನ ಮಾಡಲಿಲ್ಲ.

ಇನ್ನು ಲಂಕಾ ನೀಡಿದ 83 ರನ್ ಗಳ ಸಾಧಾರಣ ಮೊತ್ತದ ಬೆನ್ನುಹತ್ತಿದ ಭಾರತ ತಂಡ 3.5 ಓವರ್‍ಗಳಲ್ಲಿ 1 ವಿಕೆಟ್‍ ಕಳೆದುಕೊಂಡು ಜಯಭೇರಿ ಭಾರಿಸಿತು. ಈ ಮೂಲಕ ಆಸೀಸ್ ವಿರುದ್ಧದ  ಕ್ಲೀನ್‍ಸ್ವೀಪ್ ಸಾಧನೆಯ ಬಳಿಕ ಸತತ 2ನೇ ಟಿ20 ಸರಣಿಯನ್ನು ಭಾರತ ತಂಡ ಗೆದ್ದಂತಾಗಿದೆ. ಭಾರತ ತಂಡದ ಸ್ಪಿನ್ನರ್ ಅಶ್ವಿನ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಲ೦ಕಾ ಕನಿಷ್ಠ ಮೊತ್ತ
ಟಿ20 ಕ್ರಿಕೆಟ್‍ನಲ್ಲಿ ಲ೦ಕಾದ ಕನಿಷ್ಠ ಮೊತ್ತ (82) ಇದಾಗಿದೆ. 2010ರಲ್ಲಿ ಬ್ರಿಜ್'ಟೌನ್‍ನಲ್ಲಿ ಆಸ್ಟ್ರೇ ಲಿಯಾ ವಿರುದ್ಧ 87 ರನ್‍ಗೆ ಆಲೌಟ್ ಆಗಿದ್ದು, ಲ೦ಕಾದ ಹಿ೦ದಿನ ಕನಿಷ್ಠ ಮೊತ್ತವಾಗಿತ್ತು.  ನೆದಲೆ೯೦ಡ್ 2014ರಲ್ಲಿ ಲ೦ಕಾ ವಿರುದ್ಧ 39 ರನ್ ಗಳಿಸಿದ್ದು ಟಿ20 ಕ್ರಿಕೆಟ್ ಇತಿಹಾಸದ ಕನಿಷ್ಠ ಮೊತ್ತ. ಭಾರತ ವಿರುದ್ಧದ ಟಿ20 ಪ೦ದ್ಯದಲ್ಲಿ ತ೦ಡವೊ೦ದರ 2ನೇ ಕನಿಷ್ಠ ಮೊತ್ತವನ್ನು  ಲ೦ಕಾ ದಾಖಲಿಸಿತು. 2012ರಲ್ಲಿ ಇ೦ಗ್ಲೆ೦ಡ್ ತ೦ಡ 80 ರನ್‍ಗೆ ಆಲೌಟ್ ಆಗಿದ್ದು ಭಾರತ ವಿರುದ್ಧದ ಕನಿಷ್ಠ ಮೊತ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.