ಅಂಡರ್ 19 ವಿಶ್ವಕಪ್ ಫೈನಲ್: ವಿಂಡೀಸ್ ಪ್ರಬಲ ಬೌಲಿಂಗ್ ದಾಳಿಗೆ ಕುಸಿದ ಭಾರತ
ಢಾಕಾದಲ್ಲಿ ನಡೆಯುತ್ತಿರುವ ಅಂಡರ್ 19 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಪ್ರಬಲ ಬೌಲಿಂಗ್ ದಾಳಿಗೆ ಭಾರತ ತತ್ತರಿಸಿದ್ದು, ಕೇವಲ 145 ರನ್ ಗಳಿಗೆ ಆಲ್ ಔಟ್ ಆಗಿದೆ...

ಮೀರ್ ಪುರ: ಬಾಂಗ್ಲಾದೇಶದ ಮೀರ್ ಪುರದಲ್ಲಿ ನಡೆಯುತ್ತಿರುವ ಅಂಡರ್ 19 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಪ್ರಬಲ ಬೌಲಿಂಗ್ ದಾಳಿಗೆ ಭಾರತ ತತ್ತರಿಸಿದ್ದು, ಕೇವಲ 145 ರನ್ ಗಳಿಗೆ ಆಲ್ ಔಟ್ ಆಗಿದೆ.
ಟಾಸ್ ಗೆದ್ದು ಮೊದಲ ಬೌಲಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ನಾಯಕ ಶಿಮ್ರೊನ್ ಹೆಟ್ಮೆರ್ ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಬೌಲರ್ ಗಳು ಭಾರತದ ಪ್ರಮುಖ ವಿಕೆಟ್ ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಭಾರತ ತಂಡ ಕೇವಲ 50 ರನ್ ಪೇರಿಸುವಷ್ಟರಲ್ಲಿಯೇ ಭಾರತ ತಂಡದ ಬ್ಯಾಟಿಂಗ್ ಆಧಾರವಾಗಿದ್ದ ಐದು ವಿಕೆಟ್ ಗಳು ಉರುಳಿದವು. ಬ್ಯಾಟಿಂಗ್ ಆಧಾರವಾಗಿದ್ದ ಪ್ರಮುಖರು ಎರಡಂಕಿ ಮೊತ್ತವನ್ನೂ ದಾಟದೇ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಎಸ್ ಎನ್ ಖಾನ್ (51 ರನ್)ರನ್ನು ಹೊರತು ಪಡಿಸಿ ಇನ್ನಾವುದೇ ಆಟಗಾರನೂ ವಿಂಡೀಸ್ ವಿರುದ್ಧ ತಿರುಗಿ ಬೀಳುವ ಪ್ರಯತ್ನ ಮಾಡಲಿಲ್ಲ.
ಆರಂಭಿಕರಾದ ಪಂತ್ (1 ರನ್), ನಾಯಕ ಇಶಾನ್ ಕಿಶನ್ (4 ರನ್), ಸಿಂಗ್ (3 ರನ್), ವಾಷಿಂಗ್ ಟನ್ ಸುಂದರ್ (7 ರನ್), ಅರ್ಮಾನ್ ಜಾಫರ್ (5) ರನ್, ಲೊಮ್ರೋರ್ (198 ರನ್), ಮತ್ತು ಎಂಜೆ ಡಗರ್ (8 ರನ್) ವಿಂಡೀಸ್ ಬೌಲರ್ ಗಳನ್ನು ಎದುರಿಸುವಲ್ಲಿ ತಿಣುಕಾಡಿದರು. ವಿಂಡೀಸ್ ಪರ ಎಎಸ್ ಜೋಸೆಫ್ 3 ವಿಕೆಟ್, ಆರ್ ಡಿ ಜಾನ್ 3 ವಿಕೆಟ್ ಮತ್ತು ಹೋಲ್ಡರ್, ಸ್ಪ್ರಿಂಗರ್, ಪೌಲ್ ತಲಾ 1 ವಿಕೆಟ್ ಪಡೆಯುವುದರೊಂದಿಗೆ ಭಾರತದ ಕುಸಿತಕ್ಕೆ ಕಾರಣರಾದರು. ಅಂತಿಮ ವಿಕೆಟ್ ಗೆ ಅಹ್ಮದ್ ಅವರೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದ ಬಾತಮ್ ಅವರು ಕೊಂಚ ಹೋರಾಟ ನೀಡಿದರಾದರೂ ಅವರ ಹೋರಾಟ 21 ರನ್ ಗಳಿಗೆ ಸೀಮಿತವಾಯಿತು.
ಅಂತಿಮವಾಗಿ ಭಾರತ ತಂಡ 45.1 ಓವರ್ ನಲ್ಲಿ 145 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ವಿಂಡೀಸ್ ಗೆ ಗೆಲ್ಲಲು 146 ರನ್ ಗಳ ಸಾಧಾರಣ ಮೊತ್ತದ ಗುರಿ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


