ಲಂಕಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ, ಸರಣಿ ಸಮಬಲ
ಶಿಖರ್ ಧವನ್ ಆಕರ್ಷಕ ಅರ್ಧ ಶತಕ ಹಾಗೂ ಆರ್. ಅಶ್ವಿನ್ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ 69 ರನ್ ಗಳಿಂದ ಸೋಲು ಅನುಭವಿಸಿದೆ...

ರಾಂಚಿ: ಶಿಖರ್ ಧವನ್ ಆಕರ್ಷಕ ಅರ್ಧ ಶತಕ ಹಾಗೂ ಆರ್. ಅಶ್ವಿನ್ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ 69 ರನ್ ಗಳಿಂದ ಸೋಲು ಅನುಭವಿಸಿದೆ.
ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾ ಸಂಕೀರ್ಣದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಬೃಹತ್ ಮೊತ್ತ ಕಲೆ ಹಾಕಿತು. ನಿಗದಿತ ಓವರ್ ನಲ್ಲಿ ಭಾರತ 196 ರನ್ ಗಳಿಸಿತು. 197 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಭಾರತ ಪರ ರೋಹಿತ್ ಶರ್ಮಾ 43, ಶಿಖರ್ ಧವನ್ 51, ರಹಾನೆ 25, ಸುರೇಶ್ ರೈನಾ 30, ಹಾರ್ದಿಕ್ ಪಾಂಡ್ಯಾ 27, ಯುವರಾಜ್ ಸಿಂಗ್ 0 ಗಳಿಸಿ ಔಟಾದರೆ, ಧೋನಿ ಅಜೇಯ 9 ಹಾಗೂ ರವೀಂದ್ರ ಜಡೇಜಾ 1 ರನ್ ಗಳಿಸಿದ್ದಾರೆ.
ಲಂಕಾ ಪರ ತಿಸ್ಸಾರ ಪೆರೆರಾ 3, ಚಮೀರಾ 2, ಸೇನಾನಾಯಕೆ 1 ವಿಕೆಟ್ ಪಡೆದಿದ್ದಾರೆ.
ಶ್ರೀಲಂಕಾ ಪರ ಗುಣತಿಲಕ 2, ದಿಲ್ಶಾನ್ 0, ಸೀಕುಗೆ ಪ್ರಸನ್ನ 1, ಚಂಡೀಮಲ್ 31, ಕಪುಗೇದೆರಾ 32, ದಸುನ್ ಶನಕಾ 27, ತಿಸಾರಾ ಪೆರೇರಾ 0, ಸೇನಾನಾಯಕೆ 0, ಚಮೀರಾ 0, ಸಿರವರ್ದೆನಾ ಅಜೇಯ 28 ಹಾಗೂ ಕಸುನ್ ರಚಿತಾ 3 ರನ್ ಗಳಿಸಿದ್ದಾರೆ.
ಭಾರತ ಪರ ಆರ್ ಅಶ್ವಿನ್ 3, ಆಶಿಶ್ ನೆಹ್ರಾ, ರವೀಂದ್ರ ಜಡೇಜಾ ಬೂಮ್ರಾ ತಲಾ 2 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


