ಟಿ20 ವಿಶ್ವಕಪ್: ಭಾರತ ತಂಡದ ಸಾಮರ್ಥ್ಯ ಹೆಚ್ಚಿಸಿದ ಶಮಿ ಸೇರ್ಪಡೆ: ಗವಾಸ್ಕರ್
ಟಿ20 ವಿಶ್ವಕಪ್ ಸರಣಿಗೆ ಬಹುತೇಕ ಹಿರಿಯ ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಆಯ್ಕೆ ಮಾಡಿರುವ ಆಯ್ಕೆ ಸಮಿತಿಯ ಆಯ್ಕೆ ಎಲ್ಲರಿಗೂ ಅಚ್ಚರಿ ತಂದಿದ್ದರೂ, ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರಿಗೆ ಸಂತಸ ತಂದಿದೆ...

ನವದೆಹಲಿ: ಟಿ20 ವಿಶ್ವಕಪ್ ಸರಣಿಗೆ ಬಹುತೇಕ ಹಿರಿಯ ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಆಯ್ಕೆ ಮಾಡಿರುವ ಆಯ್ಕೆ ಸಮಿತಿಯ ಆಯ್ಕೆ ಎಲ್ಲರಿಗೂ ಅಚ್ಚರಿ ತಂದಿದ್ದರೂ, ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರಿಗೆ ಸಂತಸ ತಂದಿದೆ.
ಪ್ರಮುಖವಾಗಿ ಸತತ 11 ತಿಂಗಳಿಂದ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನಾಡಿರದ ಮಹಮದ್ ಶಮಿ ಅವರ ಆಯ್ಕೆ ಅಚ್ಚರಿ ತಂದಿದ್ದರೂ, ಶಮಿ ಅವರ ಸಾಮರ್ಥ್ಯ ತಿಳಿದಿರುವ ಸುನಿಲ್ ಗವಾಸ್ಕರ್ ಮಾತ್ರ ಆಯ್ಕೆ ಸಮಿತಿ ಆಯ್ಕೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಟಿ20 ವಿಶ್ವಕಪ್ ಗೆ ಬಹುತೇಕ ಆಸಿಸ್ ಪ್ರವಾಸ ಕೈಗೊಂಡಿದ್ದ ತಂಡವನ್ನೇ ಉಳಿಸಿಕೊಳ್ಳಲಾಗಿದ್ದು, ತುಂಬಾ ದಿನಗಳ ಬಳಿಕ ತಂಡಕ್ಕೆ ಮಹಮದ್ ಶಮಿ ಮತ್ತು ಪವನ್ ನೇಗಿ ಅವರ ಆಯ್ಕೆ ತಂಡದ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ 11 ತಿಂಗಳಿನಿಂದ ಶಮಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಿರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗವಾಸ್ಕರ್, ಇದು ಕೊಂಚ ಯೋಚಿಸಬೇಕಾದ ಅಂಶವೇ ಆದರೂ, ಟಿ20 ಮಾದರಿಗೆ ಇದು ದೊಡ್ಡ ಸಮಸ್ಯೆಯಲ್ಲ. ಏಕೆಂದರೆ ಇಲ್ಲಿ ಓರ್ವ ಬೌಲರ್ ಗೆ ಕೇವಲ ನಾಲ್ಕು ಓವರ್ ಗಳನ್ನು ಎಸೆಯಲು ಮಾತ್ರ ಅವಕಾಶವಿರುತ್ತದೆ. ಹೀಗಾಗಿ ವೇಗ ಮತ್ತು ಲೈನ್ ಅಂಡ್ ಲೆನ್ತ್ ಕಾಯ್ದುಕೊಂಡು ಬೌಲ್ ಮಾಡುವ ಶಮಿ ಆಯ್ಕೆ ಉಚಿತವಾಗಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
"ನನ್ನ ಪ್ರಕಾರ ಹೇಳುವುದಾದರೆ ಪ್ರಸ್ತುತ ವಿಶ್ವಕಪ್ ಗೆ ಆಯ್ಕೆಯಾಗಿರುವ ತಂಡ ಎಲ್ಲ ವಿಭಾಗಗಳಲ್ಲಿಯೂ ಉತ್ತಮ ತಂಡವಾಗಿದ್ದು, ಲೆಗ್ ಸ್ಪಿನ್ನರ್ ಗಳ ಕೊರತೆ ಕೊಂಚ ಕಂಡು ಬರುತ್ತದೆಯಾದರೂ, ಟಿ20 ಮಾದರಿಯಾದ್ದರಿಂದ ಸಾಂದರ್ಭಿಕ ಬೌಲರ್ ಗಳನ್ನು ನೆಚ್ಚಿಕೊಳ್ಳಬಹುದು. ತಂಡಕ್ಕೆ ಆಯ್ಕೆಯಾಗದ ಮನೀಶ್ ಪಾಂಡೆ ನನ್ನ ಸಲಹೆ ಎಂದರೆ ಹೆಚ್ಚೆಚ್ಚು ತರಬೇತಿ ಮಾಡಬೇಕು ಎಂದು ಗವಾಸ್ಕರ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


