ನಾವಿಬ್ಬರು ಸ್ನೇಹಿತರಷ್ಟೇ, ಆಕೆ ಮಾಡಿರುವ ಆರೋಪಗಳು ಸುಳ್ಳು: ಸರ್ದಾರ್ ಸಿಂಗ್
ಬ್ರಿಟನ್ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಯತ್ನ ನಡೆಸಿದ ಆರೋಪ ಎದುರಿಸುತ್ತಿರುವ ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್...

ಚಂಡೀಗಢ: ಬ್ರಿಟನ್ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಯತ್ನ ನಡೆಸಿದ ಆರೋಪ ಎದುರಿಸುತ್ತಿರುವ ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ನಾವಿಬ್ಬರು ಸ್ನೇಹಿತರಷ್ಟೇ, ಆಕೆ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಹೇಳಿದ್ದಾರೆ.
ಅಶ್ಪಲ್ ಭೋಗಲ್ ನನ್ನ ಗೆಳತಿ ಹಾಗೂ ಪ್ರೇಯಸಿ ಆಕೆ ಮಾಡಿರುವ ಆರೋಪವೆಲ್ಲವೂ ನಿರಾಧಾರ ಎಂದು ಸರ್ದಾರ್ ಸಿಂಗ್ ತಿಳಿಸಿದ್ದಾರೆ. ನನಗೆ ಅಶ್ಪಲ್ ಪರಿಚಿತರಾದರೂ, ಅವರಿಗೆ ನಾನು ಯಾವುದೇ ರೀತಿಯಲ್ಲಿಯೂ ಲೈಂಗಿಕ ಕಿರುಕುಳವನ್ನಾಗಲೀ ಮತ್ಯಾವುದೇ ಮಾನಸಿಕ ಹಿಂಸೆಯನ್ನಾಗಲೀ ನೀಡಿಲ್ಲ. ಬದಲಿಗೆ, ಆಕೆಯೇ ನನ್ನನ್ನು ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ಹಿಂಸಿಸುತ್ತಿದ್ದಾಳೆ. ನಮ್ಮ ನಡುವೆ ವಿವಾಹ ನಿಶ್ಚಯವೇನೂ ಆಗಿಲ್ಲ. ಸದ್ಯ ನಾನು ಹಾಕಿ ವಿವಾಹ ನಿಶ್ಚಯವೇನೂ ಆಗಿಲ್ಲ.
ಸದ್ಯ ನಾನು ಹಾಕಿ ಇಂಡಿಯಾ ಲೀಗ್(ಎಚ್ಐಎಲ್) ನಲ್ಲಿ ತಲ್ಲೀನನಾಗಿದ್ದು, ಸೂಕ್ತ ಸಮಯಕ್ಕೆ ತಕ್ಕ ಉತ್ತರ ನೀಡುತ್ತೇನೆ ಎಂದು ಎಚ್ಐಎಲ್ ನಲ್ಲಿ ಜೇಪಿ ಪಂಜಾಬ್ ವಾರಿಯರ್ಸ್ ತಂಡವನ್ನು ಮುನ್ನಡೆಸುತ್ತಿರುವ ಸರ್ದಾರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಅಶ್ಪಲ್ ಭೋಗಲ್ ಅವರು ಸರ್ದಾರ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಯತ್ನ ದೂರು ದಾಖಲಿಸಿದ್ದು, ಮದುವೆಯಾಗುತ್ತೇನೆಂದು ನಂಬಿಸಿ ಈಗ ವಂಚಿಸಿದ್ದು, ನನಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


