ಸರ್ ಜಡೇಜಾ ಸೆಕೆಂಡ್ ಇನ್ನಿಂಗ್ಸ್; ನಾಳೆ ವಿವಾಹ ನಿಶ್ಚಿತಾರ್ಥ
ಟೀಂ ಇಂಡಿಯಾದಲ್ಲಿ ಜಡ್ಡು ಎಂದೇ ಖ್ಯಾತರಾಗಿರುವ ರವೀಂದ್ರ ಜಡೇಜಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ನಾಳೆ ಅವರ ಸ್ವಗೃಹದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ತಿಳಿದುಬಂದಿದೆ...

ನವದೆಹಲಿ: ಟೀಂ ಇಂಡಿಯಾದಲ್ಲಿ ಜಡ್ಡು ಎಂದೇ ಖ್ಯಾತರಾಗಿರುವ ರವೀಂದ್ರ ಜಡೇಜಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ನಾಳೆ ಅವರ ಸ್ವಗೃಹದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ತಿಳಿದುಬಂದಿದೆ.
ಜಡೇಜಾ ಅವರ ಬಹುಕಾಲದ ಗೆಳತಿ ರಿವಾ ಸೊಲಂಕಿ ಅವರನ್ನು ವರಿಸುತ್ತಿದ್ದು, ನಾಳೆ ರಾಜ್ ಕೋಟ್ ನಲ್ಲಿರುವ ಅವರ ಮನೆಯಲ್ಲಿ ವಿವಾಹ ನಿಸ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ರಿವಾ ಸೋಲಂಕಿ, ಪ್ರಸ್ತುತ ಯುಪಿಎಸ್ ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರಿವಾ ಅವರ ತಾಯಿ ಕೇಂದ್ರ ರೈಲ್ವೇ ಇಲಾಖೆಯ ಉದ್ಯೋಗಿಯಾಗಿದ್ದು, ರಿವಾ ಅವರ ತಂದೆ ಉಧ್ಯಮಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ ಕೋಟ್ ನಲ್ಲಿರುವ ರವೀಂದ್ರ ಜಡೇಜಾ ಕುಟುಂಬದ ಒಡೆತನವಿರುವ ರೆಸ್ಟೋರೆಂಟ್ ನಲ್ಲಿ ವಿವಾಹ ನಿಶ್ಚಿತಾರ್ಥ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಳೆದ ಸೋಮವಾರವಷ್ಟೇ ಭಾರತದ ಆಟಗಾರ ವರುಣ್ ಆ್ಯರೋನ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ತಮ್ಮ ಬಾಲ್ಯಗೆಳತಿ ರಾಗಿಣಿ ಅವರನ್ನು ಆ್ಯರೋನ್ ಜೆಮ್ ಶೆಡ್ ಪುರದಲ್ಲಿ ವಿವಾಹವಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


