ಭಾರತದ ಯುವ ಜಿಮ್ನಾಸ್ಟ್ ಬ್ರಿಜೇಶ್ ಸಾವು
ಭಾರತದ ಯುವ ಜಿಮ್ನಾಸ್ಟ್ ಬ್ರಿಜೇಶ್ ಯಾದವ್ ಅಭ್ಯಾಸದ ವೇಳೆ ಕುತ್ತಿಗೆ ಮುರಿದುಕೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ...

Published On :
ನವದೆಹಲಿ: ಭಾರತದ ಯುವ ಜಿಮ್ನಾಸ್ಟ್ ಬ್ರಿಜೇಶ್ ಯಾದವ್ ಅಭ್ಯಾಸದ ವೇಳೆ ಕುತ್ತಿಗೆ ಮುರಿದುಕೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.
17 ವರ್ಷದ ಬ್ರಿಜೇಶ್ ಯಾವದ್ ಕಳೆದ ಅಕ್ಟೋಬರ್ 11 ರಂದು ಆಗ್ರಾದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಡಬಲ್ ಫ್ರಂಟ್ ಮಾಡುವ ಯತ್ನದಲ್ಲಿ ಎಡವಿದ್ದರು. ಈ ವೇಳೆ ಅವರ ಕುತ್ತಿಗೆ ಮುರಿದಿತ್ತು. ಇದರಿಂದ ಕೋಮಾಗೆ ಜಾರಿದ್ದರು.
ಎರಡು ತಿಂಗಳ ಕಾಲ ಕೋಮಾದಲ್ಲಿದ್ದ ಯುವ ಅಥ್ಲೀಟ್ ನಿಧನರಾಗಿದ್ದಾರೆ ಎಂದು ಅವರ ಕೋಚ್ ರಾಹುಲ್ ಚೋಪ್ರಾ ತಿಳಿಸಿದ್ದಾರೆ. ಆಗ್ರಾದಲ್ಲಿ ನಡೆದಿದ್ದ ರಾಷ್ಟ್ರೀಯ ಶಾಲಾ ಚಾಂಪಿಯನ್ ಷಿಪ್ ನಲ್ಲಿ ಬ್ರಿಜೇಶ್ ಬೆಳ್ಳಿ ಪದಕ ಗೆದ್ದಿದ್ದರು.
ಘಟನೆ ನಡೆದ ಕೂಡಲೇ ಬ್ರಿಜೇಶ್ ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಅವರನ್ನು ಗುರುಗ್ರಾಮದ ಪರಾಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅಕ್ಟೋಬರ್ ನಲ್ಲಿ 2 ಶಸ್ತ್ರ ಚಿಕಿತ್ಸೆಯನ್ನು ಬ್ರಿಜೇಶ್ ಗೆ ಮಾಡಲಾಗಿತ್ತು. ಆದರೆ ಅವರ ಉಸಿರಾಟದ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


