ನಗದು ಬಿಕ್ಕಟ್ಟು; ಐ ಪಿ ಟಿ ಎಲ್ ಟೆನಿಸ್ ಸರಣಿಯಿಂದ ದೂರಸರಿದ ಫೆಡೆರರ್, ಸೆರೆನಾ
ನವೆಂಬರ್ ೮ ರಂದು ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದ ನಿರ್ಧಾರದಿಂದ ದೇಶದಲ್ಲಿ ಉಂಟಾಗಿರುವ ನಗದು ಬಿಕ್ಕಟ್ಟಿನಿಂದ ಈ ವರ್ಷ ಇಂಟರ್ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್

Published On :
ನವದೆಹಲಿ: ನವೆಂಬರ್ ೮ ರಂದು ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದ ನಿರ್ಧಾರದಿಂದ ದೇಶದಲ್ಲಿ ಉಂಟಾಗಿರುವ ನಗದು ಬಿಕ್ಕಟ್ಟಿನಿಂದ ಈ ವರ್ಷ ಇಂಟರ್ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್ (ಐ ಪಿ ಟಿ ಎಲ್)ಗೆ ಕೂಡ ಬಿಸಿ ತಟ್ಟಿದೆ. ಇದೆ ಕಾರಣದಿಂದ ಖ್ಯಾತ ಟೆನಿಸ್ ತಾರೆಯರಾದ ರೋಜರ್ ಫೆಡೆರರ್ ಮತ್ತು ಸೆರೆನಾ ವಿಲಿಯಮ್ಸ್ ಸರಣಿಯಿಂದ ಹಿಂದೆ ಸರಿದಿದ್ದಾರೆ ಎಂದು ಆಯೋಜಕರು ಮಂಗಳವಾರ ಘೋಷಿಸಿದ್ದಾರೆ.
ಹೈದರಾಬಾದ್ ನಲ್ಲಿ ನಡೆಯಲಿದ್ದ ೧೦೦,೦೦೦ ಡಾಲರ್ ಮೊತ್ತ ಪ್ರಶಸ್ತಿ ಹಣದ ಈ ಸರಣಿಯ ಫೈನಲ್ ಹಂತದಲ್ಲಿ ಫೆಡೆರರ್ ಮತ್ತು ಸೆರೆನಾ ಡಿಸೆಂಬರ್ ೯ ಮತ್ತು ೧೧ ರ ನಡುವೆ ಆಡಬೇಕಿತ್ತು.
ಇಂಡಿಯನ್ ಏಸಸ್ ಜೊತೆಗೆ ಸ್ವಿಸ್ ಆಟಗಾರನು ಮತ್ತು ಸಿಂಗಾಪುರ್ ಸ್ಲಾಮ್ಮರ್ಸ್ ಜೊತೆಗೆ ಅಮೆರಿಕಾ ಆಟಗಾರ್ತಿಯೂ ಆಡುವುದಾಗಿ ನಿಗದಿಯಾಗಿತ್ತು.
"ಈ ವರ್ಷದ ಐ ಪಿ ಟಿ ಎಲ್ ನಲ್ಲಿ ರೋಜರ್ ಫೆಡೆರರ್ ಮತ್ತು ಸೆರೆನಾ ವಿಲಿಯಮ್ಸ್ ಭಾಗವಹಿಸುತ್ತಿಲ್ಲ ಎಂದು ಘೋಷಿಸಲು ದುಃಖವಾಗುತ್ತಿದೆ" ಎಂದು ಮಹೇಶ್ ಭೂಪತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಭಾರತದಲ್ಲಿ ಸದ್ಯದ ಆರ್ಥಿಕ ಪರಿಸ್ಥಿತಿ ಹಣದ ಖರ್ಚಿನ ಬಗ್ಗೆ ಅಸ್ಥಿರತೆ ಹೊಂದಿದೆ. ನಾನು ಇದನ್ನು ರೋಜರ್ ಮತ್ತು ಸೆರೆನಾ ಅವರಿಗೆ ವಿವರಿಸಿದೆ. ಅವರು ಮೊದಲೆರೆಡು ಐ ಪಿ ಟಿ ಎಲ್ ಆವೃತ್ತಿಗಳನ್ನು ಬಹಳ ಬೆಂಬಲಿಸಿದ್ದರು, ಮುಂದಿನ ವರ್ಷಗಳಲ್ಲಿ ಅವರನ್ನು ಕರೆತರುವ ನಂಬಿಕೆಯಿದೆ" ಎಂದು ಕೂಡ ಅವರು ಹೇಳಿದ್ದಾರೆ.
ಈ ಆವೃತ್ತಿಯಲ್ಲಿ ಒಟ್ಟು ೧೭ ಪಂದ್ಯಗಳು ನಡೆಯಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Roger FedererSerena Williamsಮಹೇಶ್ ಭೂಪತಿಸೆರೆನಾ ವಿಲಿಯಮ್ಸ್IPTLMahesh BhupatiDemonetisationರೋಜರ್ ಫೆಡೆರರ್ಐ ಪಿ ಟಿ ಎಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


