ಎಫ್ 1 ವಿಶ್ವ ಚಾಂಪಿಯನ್ ನಿಕೋ ರಾಸ್ಬರ್ಗ್ ಹಠಾತ್ ನಿವೃತ್ತಿ ಘೋಷಣೆ
ಫಾರ್ಮುಲ್ ಒನ್ ವಿಶ್ವ ಚಾಂಪಿಯನ್ ಮರ್ಸಿಡಿಸ್ ತಂಡದ ಜರ್ಮನ್ ಚಾಲಕ ನಿಕೋ ರಾಸ್ಬರ್ಗ್ ಹಠಾತ್ ನಿವೃತ್ತಿ ಘೋಷಿಸಿದ್ದಾರೆ...

Published On :
ನವದೆಹಲಿ: ಫಾರ್ಮುಲ್ ಒನ್ ವಿಶ್ವ ಚಾಂಪಿಯನ್ ಮರ್ಸಿಡಿಸ್ ತಂಡದ ಜರ್ಮನ್ ಚಾಲಕ ನಿಕೋ ರಾಸ್ಬರ್ಗ್ ಹಠಾತ್ ನಿವೃತ್ತಿ ಘೋಷಿಸಿದ್ದಾರೆ.
ನಿವೃತ್ತಿ ಬಗ್ಗೆ ನಿಕೋ ರಾಸ್ಬರ್ಗ್ ತಮ್ಮ ಫೇಸ್ ಬುಕ್ ಪುಟದಲ್ಲಿ ಸ್ಪಷ್ಟಪಡಿಸಿದ್ದು ರೇಸ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. 31 ವರ್ಷದ ರಾಸ್ಬರ್ಗ್ 2016 ಮರ್ಸಿಡಿಸ್ ತಂಡದಲ್ಲಿ ವಿಶ್ವಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು.
2006ರಲ್ಲಿ ಬಹ್ರೇನ್ ಗ್ರ್ಯಾನ್ ಪ್ರಿಕ್ಸ್ ಮೂಲಕ ಎಫ್-1 ರೇಸ್ ಗೆ ಪಾದಾರ್ಪಣೆ ಮಾಡಿದ್ದ ರಾಸ್ಬರ್ಗ್ ಕಳೆದ ಭಾನುವಾರ ಅಬುಧಾಬಿಯಲ್ಲಿ ನಡೆದ ಗ್ರ್ಯಾನ್ ಪ್ರೀ ಅವರ ಕೊನೆಯ ರೇಸ್ ಆಗಿದ್ದು, ಇಲ್ಲಿ ಎರಡನೇ ಸ್ಥಾನ ಪಡೆದಿದ್ದರು. ರಾಸ್ಬರ್ಗ್ ಒಟ್ಟು 23 ಗ್ರ್ಯಾನ್ ಪ್ರೀನಲ್ಲಿ ಜಯ ಸಾಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Formula oneನಿವೃತ್ತಿworld championವಿಶ್ವ ಚಾಂಪಿಯನ್retiresNico Rosbergಫಾರ್ಮುಲ್ ಒನ್ಮರ್ಸಿಡಿಸ್ನಿಕೋ ರಾಸ್ಬರ್ಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


