ಕ್ರೀಡೆ

ಕಂಚಿನ ಪದಕದಿಂದ ಬೆಳ್ಳಿಗೆ ಬಡ್ತಿ: ಪದಕ ಸ್ವೀಕರಿಸಲು ಯೋಗೇಶ್ವರ್ ದತ್ ನಿರಾಕರಣೆ

ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಬೆಳ್ಳಿ ಪದಕ ಗೆದ್ದಿದ್ದ ರಷ್ಯಾದ ಬೆಸಿಕ್ ಕುಡ್ಕೋವ್ ಅವರ ಪದಕವನ್ನು ಸ್ವೀಕರಿಸಲು ಕುಸ್ತಿಪಟು ಯೋಗೇಶ್ವರ್ ದತ್ ..

ಕಂಚಿನ ಪದಕದಿಂದ ಬೆಳ್ಳಿಗೆ ಬಡ್ತಿ: ಪದಕ ಸ್ವೀಕರಿಸಲು ಯೋಗೇಶ್ವರ್ ದತ್ ನಿರಾಕರಣೆ
ಯೋಗೇಶ್ವರ್ ದತ್
Published On :

ನವದೆಹಲಿ: ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಬೆಳ್ಳಿ ಪದಕ ಗೆದ್ದಿದ್ದ ರಷ್ಯಾದ ಬೆಸಿಕ್ ಕುಡ್ಕೋವ್ ಅವರ  ಪದಕವನ್ನು ಸ್ವೀಕರಿಸಲು ಕುಸ್ತಿಪಟು ಯೋಗೇಶ್ವರ್ ದತ್ ನಿರಾಕರಿಸಿದ್ದಾರೆ.

2012ರ  ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕುಸ್ತಿ 60 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚು ಪದಕ ಗೆದ್ದಿದ್ದ ಯೋಗೇಶ್ವರ್ ದತ್ ಅವರ ಕಂಚಿನ ಪದಕ ಬೆಳ್ಳಿ ಪದಕಕ್ಕೆ ಬಡ್ತಿ ಪಡೆದಿತ್ತು.

ಬೆಳ್ಳಿ ಪದಕ ವಿಜೇತ ರಷ್ಯಾದ ಕುಸ್ತಿಪಟು ಬೆಸಿಕ್ ಕುಡ್ಕೋವ್ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರಿಂದ ಅವರ ಪದಕವನ್ನು ಹಿಂಪಡೆಯಲಿದ್ದು ಎರಡನೇ ಸ್ಥಾನಕ್ಕೆ ಯೋಗೇಶ್ವರ್ ದತ್ ರನ್ನು ಆಯ್ಕೆ ಮಾಡಲಾಗಿತ್ತು.

ಆದರೆ ಬೆಳ್ಳಿ ಪದಕವನ್ನು ಸ್ವೀಕರಿಸಲು ಯೋಗೇಶ್ವರ್ ದತ್ ನಿರಾಕರಿಸಿದ್ದಾರೆ. ಒಬ್ಬ ಅಥ್ಲೀಟ್ ಆಗಿ ಮತ್ತೊಬ್ಬ ಅಥ್ಲೀಟ್ ನನ್ನು ಗೌರವಿಸುವುದು ನನ್ನ ಕರ್ತವ್ಯ ಹೀಗಾಗಿ ನಾನು ಪದಕ ಸ್ವೀಕರಿಸುವುದಿಲ್ಲ ಎಂದಪ ಯೋಗೇಶ್ವರ್ ದತ್ ಟ್ವೀಟ್ ಮಾಡಿದ್ದಾರೆ.

ಬೆಳ್ಳಿ ಪದಕವನ್ನು ಬೆಸಿಕ್ ಕುಡ್ಕೋವ್ ಅವರ ಕುಟುಂಬಸ್ಥರೇ ಇಟ್ಟುಕೊಳ್ಳಲಿ ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.