ರಿಯೋ ಒಲಂಪಿಕ್ಸ್: ಲಿಯಾಂಡರ್ ಪೇಸ್ ಸಿದ್ಧತೆ ನಡೆಸದೇ ಹೋಗಿದ್ದು ಅಕ್ಷಮ್ಯ, ಮಹೇಶ್ ಭೂಪತಿ
ರಿಯೋ ಒಲಂಪಿಕ್ಸ್ ನ ಡಬಲ್ಸ್ ನಲ್ಲಿ ಸೋತ ತಮ್ಮ ಮಾಜಿ ಪಾರ್ಟನರ್ ಲಿಯಾಂಡರ್ ಫೇಸ್ ವಿರುದ್ಧ ಮಹೇಶ್ ಭೂಪತಿ ಹರಿಹಾಯ್ದಿದ್ದಾರೆ...

ನವದೆಹಲಿ: ರಿಯೋ ಒಲಂಪಿಕ್ಸ್ ನ ಡಬಲ್ಸ್ ನಲ್ಲಿ ಸೋತ ತಮ್ಮ ಮಾಜಿ ಪಾರ್ಟನರ್ ಲಿಯಾಂಡರ್ ಫೇಸ್ ವಿರುದ್ಧ ಮಹೇಶ್ ಭೂಪತಿ ಹರಿಹಾಯ್ದಿದ್ದಾರೆ.
ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಅವರು ಜೊತೆಯಾಗಿ ಯಾವುದೇ ಪಂದ್ಯ ಆಡದೇ ಮತ್ತು ಅಭ್ಯಾಸವನ್ನೂ ಮಾಡದೇ ಒಲಿಂಪಿಕ್ಸ್‌ಗೆ ಹೋಗಿದ್ದು ಹಿನ್ನಡೆಗೆ ಕಾರಣವಾಯಿತು ಎಂದು ಹೇಳಿದ್ದಾರೆ.
ಒಲಿಂಪಿಕ್ಸ್‌ಗೆ ಪುರುಷರ ಡಬಲ್ಸ್ ತಂಡವು ಸಂಪೂರ್ಣ ಸಿದ್ಧತೆಯಿಂದ ಹೋಗಿರಲಿಲ್ಲ. 2004 ಮತ್ತು 2008ರ ಒಲಿಂಪಿಕ್ಸ್‌ಗಳ ಸಂದರ್ಭದಲ್ಲಿ ನಾನು ಮತ್ತು ಪೇಸ್ ಜೊತೆಗೂಡಿ ಅಭ್ಯಾಸ ಮಾಡಿರಲಿಲ್ಲ. ಆದರೆ, ಒಲಿಂಪಿಕ್ಸ್‌ಗೆ ಹೋಗುವ ಮುನ್ನ ಇಬ್ಬರೂ ಜೊತೆ ಯಾಗಿ ಕೆಲವು ಟೂರ್ನಿಗಳಲ್ಲಿ ಆಡಿದ್ದೆವು ಎಂದು ಭೂಪತಿ ನೆನಪಿಸಿಕೊಂಡರು.
ನಾನು ಮತ್ತು ಪೇಸ್ ಜೊತೆಗೂಡಿ ಎಟಿಪಿ ಟೂರ್‌ಗಳಲ್ಲಿ ಮುನ್ನೂರು ಡಬಲ್ಸ್ ಪಂದ್ಯಗಳಲ್ಲಿ ಗೆದ್ದಿದ್ದೇವೆ. ಆದರೆ, ರೋಹನ್ ಮತ್ತು ಪೇಸ್ ಒಲಿಂಪಿಕ್ಸ್‌ಗೂ ಮುನ್ನ ಡೇವಿಸ್ ಕಪ್ ಟೂರ್ನಿಯಲ್ಲಿ ಆಡಿದ್ದು ಒಂದೇ ಪಂದ್ಯ.
ಮಿಶ್ರ ಡಬಲ್ಸ್‌ನಲ್ಲಿ ಪದಕ ಸಾಧನೆ ಸಾಧ್ಯವಿತ್ತು. ಆದರೆ, ಪದಕದ ಸನಿಹ ಬಂದಿದ್ದ ಜೋಡಿಗೆ ದುರದೃಷ್ಟ ಕಾಡಿತ್ತು ಎಂದು 42 ವರ್ಷದ ಭೂಪತಿ ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


