ಕ್ರೀಡೆ

ಪಿವಿ ಸಿಂಧು,ಸಾಕ್ಷಿ ಹಾಗೂ ದೀಪಾ ಕರ್ಮಾಕರ್ ಗೆ ಡೈಮಂಡ್ ನೆಕ್ಲೇಸ್ ಗಿಫ್ಟ್

ರಿಯೋ ಒಲಿಂಪಿಕ್ಸ್ ಭಾರತದ ವನಿತೆಯರು ಉತ್ತಮ ಪ್ರದರ್ಶನ ನೀಡಿ ದೇಶದ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ. ಪಿವಿ ಸಿಂಧು, ಸಾಕ್ಷಿ ಮಲಿಕ್ ಹಾಗೂ ದೀಪಾ ...

ಪಿವಿ ಸಿಂಧು,ಸಾಕ್ಷಿ ಹಾಗೂ ದೀಪಾ ಕರ್ಮಾಕರ್ ಗೆ ಡೈಮಂಡ್ ನೆಕ್ಲೇಸ್ ಗಿಫ್ಟ್
ಪಿ.ವಿ ಸಿಂಧು, ಸಾಕ್ಷಿ ಮಲ್ಲಿಕ್ ಮತ್ತು ದೀಪಾ ಕರ್ಮಾಕರ್
Published On :

ಚೆನ್ನೈ: ರಿಯೋ ಒಲಿಂಪಿಕ್ಸ್ ಭಾರತದ ವನಿತೆಯರು ಉತ್ತಮ ಪ್ರದರ್ಶನ ನೀಡಿ ದೇಶದ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ. ಪಿವಿ ಸಿಂಧು, ಸಾಕ್ಷಿ ಮಲಿಕ್ ಹಾಗೂ ದೀಪಾ ಕರ್ಮಾಕರ್‍ಗೆ ಡೈಮಂಡ್ ನೆಕ್ಲೆಸ್ ಉಡುಗೊರೆಯಾಗಿ ಸಿಗುತ್ತಿದೆ.

ಚೆನ್ನೈನ ಎನ್‍ಎಸಿ ಜುವೆಲ್ಲರ್ಸ್ ಈ ಮೂವರು ಪದಕ ವಿಜೇತರಿಗೆ ವಜ್ರದ ನೆಕ್ಲೆಸ್ ನೀಡಲು ನಿರ್ಧರಿಸಿದೆ. ಇದರಲ್ಲಿ ಪಿವಿ ಸಿಂಧುಗೆ 6 ಲಕ್ಷ ರೂ. ಮೌಲ್ಯದ ಡೈಮಂಡ್ ನೆಕ್ಲೆಸ್, ಸಾಕ್ಷಿ ಮಲಿಕ್‍ಗೆ 3 ಲಕ್ಷ ರೂ. ಹಾಗೂ ದೀಪಾ ಕರ್ಮಾಕರ್‍ಗೆ 1 ಲಕ್ಷ ರೂ. ಮೌಲ್ಯದ ಡೈಮಂಡ್ ನೆಕ್ಲೆಸ್ ನೀಡಲು ಬಯಸಿದೆ.

2016ರ ರಿಯೋ ಒಲಿಂಪಿಕ್ಸ್‍ನಲ್ಲಿ ಬಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು, ಇತ್ತ 54 ಕೆಜಿ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಿದ್ದರು. ಇನ್ನೂ ಮೊದಲ ಬಾರಿಗೆ ರಿಯೋದಲ್ಲಿ ಭಾಗವಹಿಸಿದ್ದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರಾದರೂ ಕೋಟಿ ಕ್ರೀಡಾಭಿಮಾನಿಗಳ ಮನಗೆದ್ದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.