2020ರ ಟೋಕಿಯೋ ಒಲಿಂಪಿಕ್ಸ್ ಸಂಪೂರ್ಣ ರೋಬೋ ಒಲಿಂಪಿಕ್ಸ್ ಆಗಲಿದೆ!
ಆಧುನಿಕ ತಂತ್ರಜ್ಞಾನಗಳ ತವರು ದೇಶವಾದ ಜಪಾನ್ ನಲ್ಲಿ 2020ರ ಟೋಕಿಯೋ ಒಲಿಂಪಿಕ್ಸ್ ನಡೆಯಲಿದ್ದು ಈ ಒಪಿಂಲಿಕ್ಸ್ ಸಂಪೂರ್ಣ ರೋಬೋ ಒಲಿಂಪಿಕ್ಸ್ ಆಗಲಿದೆ...

ಆಧುನಿಕ ತಂತ್ರಜ್ಞಾನಗಳ ತವರು ದೇಶವಾದ ಜಪಾನ್ ನಲ್ಲಿ 2020ರ ಟೋಕಿಯೋ ಒಲಿಂಪಿಕ್ಸ್ ನಡೆಯಲಿದ್ದು ಈ ಒಪಿಂಲಿಕ್ಸ್ ಸಂಪೂರ್ಣ ರೋಬೋ ಒಲಿಂಪಿಕ್ಸ್ ಆಗಲಿದೆ ಹೀಗೆಂದು ಸ್ವತಃ ಜಪಾನ್ ಪ್ರಧಾನಿ ಜಗತ್ತಿಗೆ ಮಾತು ಕೊಟ್ಟಿದ್ದಾರೆ.
ಜಗತ್ತಿನ ಹೆಚ್ಚಿನ ಭಾಷೆಗೆ ಭಾಷಾಂತರ ಮಾಡುವ ಆ್ಯಪ್ ಗಳೊಂದಿಗೆ ರೋಬಾಟ್ ಕ್ರೀಡಾಗ್ರಾಮ ನಿರ್ಮಿಸುವುದಾಗಿ ಪ್ರಧಾನಿ ಶಿಂಜೊ ಅಬೆ ಅವರು ಹೇಳಿಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ರೋಬೋ ಒಲಿಂಪಿಕ್ಸ್ ಆಗಲಿದ್ದು ಆಟಗಾರರ ಲಗೇಜ್ ಗಳು, ಟ್ಯಾಕ್ಸಿ ಓಡಿಸಲು ರೋಬೋ ಬಳಕೆಯಾಗುವುದಲ್ಲದೆ, ಡ್ರೈವರ್ ಗಳೇ ಇಲ್ಲದ ಮತ್ತು ರೋಬೋಗಳು ಓಡಿಸುವ ಕಾರುಗಳು ಮುಂದಿನ ಒಲಿಂಪಿಕ್ಸ್ ವೇಳೆ ಓಡಾಲಿವೆಯಂತೆ.
ಟೋಕಿಯೋ ಒಲಿಂಪಿಕ್ಸ್ ವೀಕ್ಷಣೆಗೆ ಬರುವವರಿಗೆ ಸ್ಟೇಡಿಯಂನ ಸೀಟ್ ಹುಡುಕಲು ರೋಬೋ ಸಹಾಯ ಮಾಡಲಿವೆಯಂತೆ. ಇನ್ನು ಗಂಟೆಗೆ 600 ಕಿಮೀ ಓಡುವ ಸೂಪರ್ ಸ್ಪೀಡ್ ಮ್ಯಾಗ್ಲೆವ್ ರೈಲುಗಳು ಬಳಕೆಗೆ ಲಭ್ಯವಾಗಲಿವೆ. ಇನ್ನು ಟೋಕಿಯೋ ನ್ಯಾಷನಲ್ ಸ್ಟೇಡಿಯಂ 5ಜಿ ವೇಗದ ಇಂಟರ್ ನೆಟ್ ಸೇವೆಗಳು ಉಚಿತವಾಗಿ ಲಭ್ಯವಿರಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


