ಒಡಿಶಾ ಸ್ಲಂ ಬಾಲಕನಿಗೆ ಜರ್ಮನಿಯಲ್ಲಿ ಫುಟ್ಬಾಲ್ ತರಬೇತಿ ಪಡೆಯುವ ಆಫರ್
ಜರ್ಮನ್ ಪ್ರತಿಷ್ಠಿತ ಫುಟ್ ಬಾಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಸದಾವಕಾಶವೊಂದು ಒಡಿಶಾದ ಸ್ಲಂ ಬಾಲಕನೊರ್ವನಿಗೆ ಒಲಿದಿದೆ...

ಭುವನೇಶ್ವರ: ಜರ್ಮನ್ ಪ್ರತಿಷ್ಠಿತ ಫುಟ್ ಬಾಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಸದಾವಕಾಶವೊಂದು ಒಡಿಶಾದ ಸ್ಲಂ ಬಾಲಕನೊರ್ವನಿಗೆ ಒಲಿದಿದೆ.
ಶಬರ್ ಸಹಿ ಸ್ಲಂನ ಬಾಲಕ 11 ವರ್ಷದ ಚಂದನ್ ನಾಯಕ್ ನಿಗೆ ಜರ್ಮನಿಯ ಪ್ರತಿಷ್ಠಿತ ಬೇಯರ್ನ್ ಮ್ಯೂನಿಚ್ ಫುಟ್ಬಾಲ್ ಅಕಾಡೆಮಿ ತರಬೇತಿ ನೀಡುವ ಆಫರ್ ಕೊಟ್ಟಿದೆ. ಪುಣೆಯಲ್ಲಿ ನಡೆದ ಆಲ್ ಇಂಡಿಯಾ ಟೂರ್ನಿಗೆ ಚಂದನ್ ಅರ್ಹತೆ ಪಡೆದ ನಂತರ ಬೇಯರ್ನ್ ಮ್ಯೂನಿಚ್ ಅಕಾಡೆಮಿ ಎರಡು ತಿಂಗಳ ಕಾಲ ತರಬೇತಿ ನೀಡುವ ಆಫರ್ ನೀಡಿದೆ.
ಈ ಆಫರ್ ಕುರಿತಂತೆ ಹರ್ಷ ವ್ಯಕ್ತಪಡಿಸಿರುವ ಚಂದನ್, ಜರ್ಮನಿ ಪ್ರತಿಷ್ಠಿತ ಫುಟ್ಬಾಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. ಮುಂದೊಂದು ದಿನ ನಾನು ಭಾರತ ಫುಟ್ಬಾಲ್ ತಂಡದ ಆಟಗಾರನಾಗುತ್ತೇನೆ ಎಂಬ ಭರವಸೆ ವ್ಯಕ್ತಪಡಿಸಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


