ಕಳಪೆ ಆಡಳಿತವೇ ಪದಕಗಳ ಕೊರತೆಗೆ ಕಾರಣ: ಸಿಎಂ ಕೇಜ್ರಿವಾಲ್
ಕ್ರೀಡೆಯಲ್ಲಿರುವ ಕಳಪೆ ಆಡಳಿತವೇ ಇಂದು ದೇಶಕ್ಕೆ ಪದಕಗಳ ಕೊರತೆಯುಂಟಾಗಲು ಕಾರಣವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ...

ಪಣಜಿ: ಕ್ರೀಡೆಯಲ್ಲಿರುವ ಕಳಪೆ ಆಡಳಿತವೇ ಇಂದು ದೇಶಕ್ಕೆ ಪದಕಗಳ ಕೊರತೆಯುಂಟಾಗಲು ಕಾರಣವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರು ಸೋಮವಾರ ಹೇಳಿದ್ದಾರೆ.
ಗೋವಾದಲ್ಲಿಂದು ಕ್ರೀಡಾ ಮಂಡಳಿಯ ನಿರ್ವಾಹಕರನ್ನು ಭೇಟಿ ಮಾಡಿ ನಂತರ ಮಾತನಾಡಿರುವ ಅವರು, ಕಳಪೆ ಕ್ರೀಡಾ ಆಡಳಿತದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಅಥ್ಲೀಟ್ಸ್ ಗಳು ಪದಕ ಗೆಲ್ಲುವಲ್ಲಿ ವಿಫಲರಾದರು ಎಂದು ಹೇಳಿದ್ದಾರೆ. ಅಲ್ಲದೆ, ದೇಶದಲ್ಲಿರುವ ಭ್ರಷ್ಟಾಚಾರವನ್ನು ತೊಲಗಿಸಿ, ಪರಿಸ್ಥಿತಿಯನ್ನು ಸುಧಾರಿಸುತ್ತೇವೆಂದು ಭರವಸೆ ನೀಡಿದ್ದಾರೆ.
ಬ್ಯಾಸ್ಕೆಟ್ ಬಾಲ್, ಚೆಸ್, ಕ್ರಿಕೆಟ್, ಟೇಬಲ್ ಟೆನ್ನಿಸ್, ಫುಟ್ ಬಾಲ್ ಕ್ರೀಡಾ ನಿರ್ವಾಹಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಮಾತುಕತೆ ವೇಳೆ ಹಲವರು ಬಹು ಹಂತದ ( ಮಲ್ಟಿ ಟೈಯರ್ ಸ್ಫೋರ್ಟ್ಸ್ ಪಾಲಿಸಿ)ಕ್ರೀಡಾ ನೀತಿಯನ್ನು ಜಾರಿಗೆ ತರುವಂತೆ ಮನವಿ ಮಾಡಿಕೊಂಡಿದ್ದಾರೆಂದು ಹೇಳಿದ್ದಾರೆ.
ಬಹುಹಂತದ ಕ್ರೀಡಾ ನೀತಿಯಲ್ಲಿ ವಿವಿಧ ರೀತಿಯ ಎಲ್ಲಾ ಕ್ರೀಡೆಗಳಿಗೆ, ಎಲ್ಲಾ ಹಂತದಲ್ಲಿಯೂ ಗಮನ ನೀಡಲಾಗುತ್ತದೆ. ಸ್ಥಳೀಯ ಕ್ರೀಡಾಪಟುಗಳು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವ ವೃತ್ತಿಪರ ಕ್ರೀಡಾಪಟುಗಳಂತಹ ಎಲ್ಲಾ ರೀತಿಯ ಕ್ರೀಡಾಪಟುಗಳಿಗೂ ಇಲ್ಲಿ ಗಮನಕೊಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


