"ಬೆಳ್ಳಿ"ತಾರೆ ಪಿವಿ ಸಿಂಧುಗಾಗಿ ಬಿರಿಯಾನಿ, ಮೈಸೂರು ಪಾಕ್ ಸಿದ್ಧ ಪಡಿಸಿದ ತಾಯಿ
ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ತವರಿಗೆ ವಾಪಸ್ ಆಗಿರುವ "ಬೆಳ್ಳಿ"ತಾರೆ ಪಿವಿ ಸಿಂಧುಗಾಗಿ ಅವರ ತಾಯಿ ವಿಜಯ ಅವರು ಸ್ಪೆಷಲ್ ಬಿರಿಯಾನಿ ಹಾಗೂ ಮೈಸೂರು ಪಾಕ್ ಸಿದ್ಧಪಡಿಸಿದ್ದಾರಂತೆ.

ಹೈದರಾಬಾದ್: ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ತವರಿಗೆ ವಾಪಸ್ ಆಗಿರುವ "ಬೆಳ್ಳಿ"ತಾರೆ ಪಿವಿ ಸಿಂಧುಗಾಗಿ ಅವರ ತಾಯಿ ವಿಜಯ ಅವರು ಸ್ಪೆಷಲ್ ಬಿರಿಯಾನಿ ಹಾಗೂ ಮೈಸೂರು ಪಾಕ್ ಸಿದ್ಧಪಡಿಸಿದ್ದಾರಂತೆ.
ಕೋಚ್ ಪುಲ್ಲೆಲ ಗೋಪಿಚಂದ್ ಆಜ್ಞೆ ಮೇರೆಗೆ ಒಲಿಂಪಿಕ್ಸ್ ಗಾಗಿ ಕಳೆದ ನಾಲ್ಕು ತಿಂಗಳಿನಿಂದ ಕಠಿಣ ಡಯಟ್ ನಲ್ಲಿದ್ದ ಪಿವಿ ಸಿಂಧು ಅವರು ಇಂದು ತಮ್ಮ ಡಯಟ್ ಅನ್ನು ಮುರಿಯಲಿದ್ದು, ಕೋಚ್ ಗೋಪಿಚಂದ್ ರೊಂದಿಗೆ ಔತಣಕೂಟದಲ್ಲಿ ಭಾಗಿಯಾಗಿ ತಮಗಿಷ್ಟದ ತಿನಿಸುಗಳನ್ನು ಸವಿಯಲಿದ್ದಾರೆ. ಪದಕ ವಿಜೇತ ಪುತ್ರಿ ಸಿಂಧುಗಾಗಿ ಅವರ ತಾಯಿ ವಿಜಯ ಅವರು ಹಲವು ತಿನಿಸುಗಳನ್ನು ತಯಾರಿಸಿದ್ದು, ವಿಶೇಷವಾಗಿ ಹೈದರಾಬಾದ್ ಸ್ಪೆಷಲ್ ಬಿರಿಯಾನಿ ಹಾಗೂ ಮೈಸೂರು ಪಾಕ್ ಸಿದ್ಧಪಡಿಸಿದ್ದಾರಂತೆ.
ಇಂದು ಸಂಜೆ ಸಿಂಧು ಅವರ ಹೈದರಾಬಾದ್ ನ ಕೋಕಾಪೇಟಾ ನಿವಾಸದಲ್ಲಿ ನಡೆಯಲಿರುವ ಔತಣಕೂಟದಲ್ಲಿ ಕೋಚ್ ಗೋಪಿಚಂದ್ ಸೇರಿದಂತೆ ಸಿಂಧುರೊಂದಿಗೆ ರಿಯೋ ಗೆ ತೆರಳಿದ್ದ ಕ್ರೀಡಾ ಇಲಾಖೆಯ ಸಹ ಅಧಿಕಾರಿಗಳು ಪಾಲ್ಗೊಳ್ಳಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


