ಕ್ರೀಡೆ

ಪದಕದಾಸೆ ನುಚ್ಚು ನೂರು; ಅರ್ಹತಾ ಸುತ್ತಿನಲ್ಲೇ ಮುಗ್ಗರಿಸಿದ ಯೋಗೇಶ್ವರ್ ದತ್

ಪುರುಷರ 65 ಕೆಜಿ ಕುಸ್ತಿ ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾರತದ ಕುಸ್ತಿಪಟು ಯೋಗೇಶ್ವರ್ ದತ್...

Published On :
ರಿಯೊ ಡಿ ಜನೈರೊ: ಪುರುಷರ 65 ಕೆಜಿ ಕುಸ್ತಿ ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾರತದ ಕುಸ್ತಿಪಟು ಯೋಗೇಶ್ವರ್ ದತ್ ಸೋಲನುಭವಿಸಿದ್ದಾರೆ. ಅವರು ಮಂಗೋಲಿಯಾ ದೇಶದ ಮಂದಕ್ನರನ್ ವಿರುದ್ಧ 0-3 ಅಂತರದಿಂದ ಪರಾಭವ ಕಂಡಿದ್ದಾರೆ. 
ಈ ಮೂಲಕ ರಿಯೊ ಒಲಿಂಪಿಕ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಅಭಿಯಾನ ಕೊನೆಗೊಂಡಂತಾಗಿದೆ.
ಈ ವರ್ಷ ಭಾರತ, ಇಬ್ಬರು ಮಹಿಳಾ ಕ್ರೀಡಾಪಟುಗಳು ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಪಿ.ವಿ.ಸಿಂಧುಗೆ ಬೆಳ್ಳಿ ಹಾಗೂ ಸಾಕ್ಷಿ ಮಲಿಕ್ ಗೆ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಸಿಕ್ಕಿದ್ದು ಬಿಟ್ಟರೆ ಪುರುಷ ಕ್ರೀಡಾಪಟುಗಳಿಗ್ಯಾರಿಗೂ ಪದಕ ಒಲಿದಿಲ್ಲ.
ಮೊದಲ ಮೂರು ನಿಮಿಷಗಳಲ್ಲಿ ಹಿಂದುಳಿದ ಯೋಗೇಶ್ವರ್ ದತ್ 0-1ರಲ್ಲಿದ್ದರು. ಮಂಗೋಲಿಯಾದ ಆಟಗಾರ ಮಂದಕ್ನರನ್ ಅವರ ರಕ್ಷಣಾ ಆಟ ಸೊಗಸಾಗಿತ್ತು.

ಕಳೆದ ಬಾರಿಯ ಲಂಡನ್ ಒಲಿಂಪಿಕ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಯೋಗೇಶ್ವರ ದತ್ ಅವರ ಮೇಲೆ ಭಾರತದ ನಿವಾಸಿಗಳು ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ಅವರು ಈ ಸಲವೂ ಗೆಲ್ಲಲೆಂದು ಅವರ ಅಭಿಮಾನಿಗಳು ಪೂಜೆ-ಹವನ, ಪ್ರಾರ್ಥನೆಗಳನ್ನು ಇಂದು ಬೆಳಗ್ಗೆಯಿಂದಲೇ ನಡೆಸುತ್ತಿದ್ದರು. 

ರಿಯೊ ಒಲಿಂಪಿಕ್ ನಲ್ಲಿ ಆಡಲು ಅರ್ಹತೆ ಪಡೆದಿದ್ದ 33 ವರ್ಷದ ಯೋಗೇಶ್ವರ ದತ್ ಹಾದಿ ಸುಲಭವಾಗಿರಲಿಲ್ಲ. ಕಳೆದ ವರ್ಷ ಅವರು ಮೂರು ಸರ್ಜರಿಗೊಳಗಾಗಿದ್ದರು. ಅದರಿಂದಾಗಿ ಸತತ ಅಭ್ಯಾಸದ ಮೇಲೆ ಗಮನ ಹರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. 

ಭಾರತದ ಪುರುಷ ಕುಸ್ತಿಪಟುಗಳಿಗೆ ಈ ವರ್ಷ ಸಂತಸದಾಯಕವಾಗಿರಲಿಲ್ಲ. 57 ಕೆಜಿ ಫ್ರೀ ಸ್ಟೈಲ್ ನಲ್ಲಿ ಸಂದೀಪ್ ತೊಮರ್, 85 ಕೆಜಿ ಗ್ರೀಕೋ-ಜರ್ಮನ್ ಮತ್ತು 98 ಕೆಜಿ ಗ್ರೀಕೋ-ರೋಮನ್ ನಲ್ಲಿ ಹರ್ದೀಪ್ ಸಿಂಗ್ ಇದಕ್ಕೂ ಮುನ್ನ ನಿರ್ಗಮಿಸಿದ್ದರು. 

ಇಂದು ಕೊನೆಗೊಳ್ಳುವ ರಿಯೊ ಒಲಿಂಪಿಕ್ ನಲ್ಲಿ ಅಂತಿಮ ಪದಕದ ಆಸೆಯಲ್ಲಿ ಭಾರತ ಇತ್ತು. ಯೋಗೇಶ್ವರ ದತ್ ನಿರ್ಗಮನದ ಮೂಲಕ ಅದು ಭಗ್ನವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.