ಕ್ರೀಡೆ

ಬೆಳ್ಳಿ ಪದಕದೊಂದಿಗೆ ಎಂಗೇಜ್ ಮೆಂಟ್ ರಿಂಗ್ ದಕ್ಕಿಸಿಕೊಂಡ ಚೀನಾ ಡೈವರ್ ಹೆ ಜಿ

ಒಲಿಂಪಿಕ್ ಡೈವಿಂಗ್ ಪೂಲ್ ನಲ್ಲಿ ಪ್ರೀತಿ ಹುಟ್ಟಿಕೊಂಡಿದೆ. ಚೀನಾ ದೇಶದ ಡೈವರ್ ಹೆ ಜಿ ಮಹಿಳೆಯರ ಮೂರು ಮೀಟರ್ ...

ಬೆಳ್ಳಿ ಪದಕದೊಂದಿಗೆ ಎಂಗೇಜ್ ಮೆಂಟ್ ರಿಂಗ್ ದಕ್ಕಿಸಿಕೊಂಡ ಚೀನಾ ಡೈವರ್ ಹೆ ಜಿ
ನಿನ್ನೆ ಒಲಿಂಪಿಕ್ಸ್ ಕ್ರೀಡಾಂಗಣದ ಕೊಳ ಸಮೀಪ ಪ್ರಿಯತಮೆ ಹೆ ಜಿಗೆ ಮದುವೆ ಪ್ರಸ್ತಾಪ ಮಾಡಿದ ಕಿನ್ ಕೈ.
Published On :
ರಿಯೊ ಡಿ ಜನೈರೊ: ಒಲಿಂಪಿಕ್ ಡೈವಿಂಗ್ ಪೂಲ್ ನಲ್ಲಿ ಪ್ರೀತಿ ಹುಟ್ಟಿಕೊಂಡಿದೆ. ಚೀನಾ ದೇಶದ ಡೈವರ್ ಹೆ ಜಿ ಮಹಿಳೆಯರ ಮೂರು ಮೀಟರ್ ಸ್ಪ್ರಿಂಗ್ ಬೋರ್ಡ್ ಡೈವಿಂಗ್ ಅಂತಿಮ ಪಂದ್ಯದಲ್ಲಿ ನಿನ್ನೆ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಆದರೆ ಅವರಿಗೆ ಅದಕ್ಕಿಂತಲೂ ದೊಡ್ಡದಾದ ಬಹುಮಾನ ಕಾದಿತ್ತು, ಅದು ಎಂಗೇಜ್ ಮೆಂಟ್ ರಿಂಗ್.
ಪದಕ ಸ್ವೀಕರಿಸಿ ಬಂದ ಹೆ ಜಿ ಕೊಳವೆ ಸಮೀಪ ಬರುತ್ತಿದ್ದಂತೆ ಆಕೆಯ ಬಾಯ್ ಫ್ರೆಂಡ್ ಸಹ ಈಜುಗಾರ ಚೀನಾದ ಕಿನ್ ಕೈ ಆಕೆಗೆ ಮದುವೆ ಪ್ರಸ್ತಾಪ ಮುಂದಿಟ್ಟು ಅಚ್ಚರಿಗೊಳಿಸಿದ. ಗಂಭೀರನಾದ ಕಿನ್ ಮಂಡಿಯೂರಿ ಕುಳಿತು ಆಕೆಯ ಮುಂದೆ ಮದುವೆ ಪ್ರಸ್ತಾಪ ಮಾಡಿ ಉಂಗುರದ ಬಾಕ್ಸನ್ನು ತೆರೆದನು.
ಕಿನ್ ರಿಂಗ್ ತೆಗೆಯುತ್ತಿದ್ದಂತೆ ಹೆ ಜಿ ಯಸ್ ಎಂದು ತಲೆಯಾಡಿಸಿಬಿಟ್ಟಳು. ಕಿನ್ ಬಾಕ್ಸ್ ನೊಳಗೆ ಗುಲಾಬಿ ಹೂವಿನಿಂದ ಅಲಂಕರಿಸಿದ ಉಂಗುರವನ್ನು ಅವಳ ಕೈ ಸಮೀಪ ತಂದ, ಆಕೆ ನಾಚಿ ನೀರಾದಳು. 
ಅಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳು ಖುಷಿಯಿಂದ ಚಪ್ಪಾಳೆ ತಟ್ಟಿ ತಮ್ಮ ಸಹಮತ ಸೂಚಿಸಿದರು. ಕಿನ್ ಕೈಯ ಇತರ ಡೈವರ್ ಗಳು ಒಂದು ಕ್ಷಣ ಅವಕ್ಕಾಗಿ ನಿಂತು ಏನು ನಡೆಯುತ್ತಿದೆ ಎಂದು ನೋಡಿದರು.
ಡೈವಿಂಗ್ ಸ್ಪರ್ಧೆಯಲ್ಲಿ 12ನೇ ಮತ್ತು ಕೊನೆಯ ಸ್ಥಾನ ಗಳಿಸಿದ ಸಹ ಸ್ಪರ್ಧಿ ಅಮೆರಿಕದ ಅಬ್ಬಿ ಜಾನ್ಟ್ಸನ್, ಅವರಿಬ್ಬರು ಮದುವೆಯಾಗುತ್ತಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ.
ಈ ಸಂಗಾತಿ ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.