ಪಾಕಿಸ್ತಾನ ಕ್ರಿಕೆಟ್ ದಂತಕಥೆ ಹನೀಫ್ ಮುಹಮ್ಮದ್ ನಿಧನ
ಏಷ್ಯಾದ ಬ್ರಾಡ್ಮನ್ ಎಂದೇ ಖ್ಯಾತಿ ಗಳಿಸಿದ್ದ ಪಾಕಿಸ್ತಾನ ಕ್ರಿಕೆಟ್ ದಂತಕತೆ ಹನೀಫ್ ಮುಹಮ್ಮದ್...

Published On :
ಕರಾಚಿ: ಏಷ್ಯಾದ ಬ್ರಾಡ್ಮನ್ ಎಂದೇ ಖ್ಯಾತಿ ಗಳಿಸಿದ್ದ ಪಾಕಿಸ್ತಾನ ಕ್ರಿಕೆಟ್ ದಂತಕತೆ ಹನೀಫ್ ಮುಹಮ್ಮದ್ ನಿನ್ನೆ(ಗುರುವಾರ) ನಿಧನರಾಗಿದ್ದಾರೆ. 81 ವರ್ಷದ ಹನೀಫ್ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
ಹನೀಫ್ ಅವರ ನಿಧನವನ್ನು ಕರಾಚಿಯ ಆಗಾ ಖಾನ್ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ. ಇದಕ್ಕೂ ಮೊದಲು ಹನೀಫ್ ಅವರ ಹೃದಯ ಬಡಿತ ಸುಮಾರು 6 ನಿಮಿಷಗಳ ಕಾಲ ನಿಂತು ಹೋಗಿತ್ತು. ಇದರಿಂದ ಹನೀಫ್ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರೂ ಘೋಷಿಸಿದ್ದರು.
6 ನಿಮಿಷಗಳ ನಂತರ ಹನೀಫ್ ಅವರ ಹೃದಯ ಬಡಿತ ಹೊಡೆದುಕೊಳ್ಳಲು ಶುರುವಿಟ್ಟುಕೊಂಡಿತ್ತು. ಇದಾದ ಬಳಿಕ ಹನೀಫ್ ಅವರ ಮಗ ಶೋಯಬ್ ತಮ್ಮ ತಂದೆ ಇನ್ನೂ ಜೀವಂತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಆದರೆ ಇದೀಗ ಹನೀಫ್ ಅವರು ಮೃತಪಟ್ಟಿರುವುದಾಗಿ ವೈದ್ಯ ಮೂಲಗಳು ಖಚಿತ ಪಡಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


