ರಿಯೋ ಒಲಿಂಪಿಕ್ಸ್: ರೋಯಿಂಗ್ ನಲ್ಲಿ ಭಾರತದ ದತ್ತುಗೆ ನಿರಾಸೆ
ಭಾರತದ ದತ್ತು ಬಬನ್ ಭೊಕನಲ್ ಅವರು ರೋಯಿಂಗ್ ಸಿಂಗಲ್ ಸ್ಕಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ರಿಯೋ...

Published On :
ರಿಯೋ ಡಿ ಜನೈರೊ: ಭಾರತದ ದತ್ತು ಬಬನ್ ಭೊಕನಲ್ ಅವರು ರೋಯಿಂಗ್ ಸಿಂಗಲ್ ಸ್ಕಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ರಿಯೋ ಒಲಿಂಪಿಕ್ಸ್ ನಿಂದ ಹೊರಬಿದ್ದಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆದು ಕ್ವಾರ್ಟರ್ ಫೈನ್ ಪ್ರವೇಶಿಸಿದ್ದ ಸೇನೆಯ ರೋವರ್ ದತ್ತು ಇಂದು ನಡೆದ ನಾಲ್ಕನೇ 2000 ಮೀ, ಸಿಂಗಲ್ ಸ್ಕಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ 6 ನಿಮಿಷ 59.89 ಸೆಕೆಂಡ್ಸ್ ಗಳಲ್ಲಿ ಗುರಿ ತಲುಪಿದರೂ ಸೆಮಿಫೈನಲ್ ಹಂತಕ್ಕೇರಲು ಸಾಧ್ಯವಾಗಲಿಲ್ಲ,
ಒಂದು ಹಂತದಲ್ಲಿ ಮೂರನೇ ಸ್ಥಾನದಲ್ಲಿದ್ದ ದತ್ತು ವೇಗ ಕಾಯ್ಜುಕೊಳ್ಳವಲ್ಲಿ ವಿಫಲವಾದರು. ಪರಿಣಾಮ ನಾಲ್ಕನೇ ಸ್ಥಾನದಲ್ಲಿದ್ದ ಪೋಲೆಂಡ್ ನ ರೋವರ್ ನತಾನ್ ವೆಗ್ರೆಸ್ಕಿ ಸೈಮ್ಷೆಕ್ ಅವರು ಮೂರನೇ ಸ್ಥಾನ ಪಡೆದು ಸೆಮಿಫೈನಲ್ ಗೆ ಅರ್ಹತೆ ಪಡೆದುಕೊಂಡರು. ಕ್ರೊಯೇಷ್ಯಾದ ಡಾಮಿರ್ ಮಾರ್ಟಿನ್ ಮೊದಲ ಸ್ಥಾನ ಪಡೆದರೆ, ಬ್ರಿಟನ್ ನ ಅಲಾನ್ ಕ್ಯಾಂಪ್ ಬೆಲ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


