ಕ್ರೀಡೆ

ರಿಯೋ ಒಲಿಂಪಿಕ್ಸ್ ನಲ್ಲಿ ಮೊಮ್ಮಗನ ಸಾಧನೆ: ಸಂಭ್ರಮದ ನಡುವೆ ಅಜ್ಜಿ ಸಾವು

ರಿಯೋ ಒಲಿಂಪಿಕ್ಸ್ ನಲ್ಲಿ ಥಾಲ್ಯಾಂಡ್ ವೇಟ್ ಲಿಫ್ಟರ್ ಸಿನ್ಪೆಟ್ ಕುರೈಥಾಂಗ್ ಕಂಚಿನ ಪದಕ ಗೆದ್ದ ಸಂಭ್ರಮಾಚರಣೆ ವೇಳೆ ಆತನ ಅಜ್ಜಿ ಮೃತಪಟ್ಟಿದ್ದಾರೆ...

ರಿಯೋ ಒಲಿಂಪಿಕ್ಸ್ ನಲ್ಲಿ ಮೊಮ್ಮಗನ ಸಾಧನೆ: ಸಂಭ್ರಮದ ನಡುವೆ ಅಜ್ಜಿ ಸಾವು
ಸಿನ್ಪೆಟ್ ಕುರೈಥಾಂಗ್
Published On :
ಬ್ಯಾಂಕಾಕ್: ರಿಯೋ ಒಲಿಂಪಿಕ್ಸ್ ನಲ್ಲಿ ಥಾಲ್ಯಾಂಡ್ ವೇಟ್ ಲಿಫ್ಟರ್ ಸಿನ್ಪೆಟ್ ಕುರೈಥಾಂಗ್ ಕಂಚಿನ ಪದಕ ಗೆದ್ದ ಸಂಭ್ರಮಾಚರಣೆ ವೇಳೆ ಆತನ ಅಜ್ಜಿ ಮೃತಪಟ್ಟಿದ್ದಾರೆ. 
84 ವರ್ಷದ ಸುಬೀನ್ ಎಂಬುವರು ಮೊಮ್ಮೆಗ 20 ವರ್ಷದ ಸಿಲ್ಪೆಟ್ 56 ಕೆಜಿ ವಿಭಾಗದಲ್ಲಿ ವೇಟ್ ಲಿಫ್ಟಿಂಗ್ ಪ್ರದರ್ಶನ ನೀಡುತ್ತಿದ್ದನ್ನು ಮನೆಯಲ್ಲಿ ಕುಳಿತು ವೀಕ್ಷಿಸುತ್ತಿದ್ದರು. ಈ ವೇಳೆ ಕಂಚಿನ ಪದಕ ಗೆದ್ದ ಸಂಭ್ರಮಾಚರಣೆಯಲ್ಲಿ ಕುಟುಂಬವರ್ಗ ತೊಡಗಿದ್ದಾಗ ಸುಬೀನ್ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. 
ಸುಬೀನ್ ಕುಸಿದು ಬೀಳುತ್ತಿದ್ದಂತೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಅಷ್ಟರಲ್ಲಾಗಲೇ ಸುಬೀನ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
ಮೊಮ್ಮಗನ ಸಾಧನೆಯಿಂದ ಅತೀ ಖುಷಿಗೆ ಒಳಗಾಗಿ ಆಕೆ ಮೃತಪಟ್ಟಿದ್ದಾರಾ ಅಥವಾ ಮೊದಲು ಅನಾರೋಗ್ಯದಿಂದ ಬಳಲುತ್ತಿದ್ದರಾ ಎಂಬುದು ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 
ಸಿನ್ಪೆಟ್ ಸದ್ಯ ರಿಯೋ ಒಲಿಂಪಿಕ್ಸ್ ನಲ್ಲಿ ಥಾಲ್ಯಾಂಡ್ ಪರ ಪದಕ ಗೆದ್ದ ಎರಡನೇ ಕ್ರೀಡಾಪಟುವಾಗಿದ್ದಾರೆ. ಇದಕ್ಕೂ ಮುನ್ನ ವೇಟ್ ಲಿಫ್ಟಿಂಗ್ 48 ಕೆಜಿ ಮಹಿಳಾ ವಿಭಾಗದಲ್ಲಿ ಸೋಪಿತ ತನಸನ್ ಎಂಬುವರು ಚಿನ್ನದ ಪದಕ ಗೆದ್ದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.