ಒಲಿಂಪಿಕ್ಸ್‌ನಲ್ಲಿ ಪುತ್ರನ ಪ್ರದರ್ಶನ ನೋಡಲು ತವಕಿಸುತ್ತಿದ್ದ ತಂದೆಗೆ ಆಸರೆಯಾದ ಪ್ರಯಾಣಿಕ
ಜಗತ್ ಪ್ರಸಿದ್ಧ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆಂಬುದು ಪ್ರತಿಯೊಬ್ಬ ಕ್ರೀಡಾಪಟುಗಳ ಹೆಬ್ಬಯಕೆಯಾಗಿರುತ್ತದೆ. ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸುವ...

ಜಗತ್ ಪ್ರಸಿದ್ಧ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆಂಬುದು ಪ್ರತಿಯೊಬ್ಬ ಕ್ರೀಡಾಪಟುಗಳ ಹೆಬ್ಬಯಕೆಯಾಗಿರುತ್ತದೆ. ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸುವ ಮಕ್ಕಳ ಪ್ರದರ್ಶನವನ್ನು ನೇರವಾಗಿ ಕಂಡು ಕಣ್ತುಂಬಿಕೊಳ್ಳಬೇಕೆಂಬ ಆಸೆ ತಂದೆ ತಾಯಿಗಳಿಗೂ ಇರುತ್ತದೆ.
ಅಂತೆ ಯೂಬರ್ ಕ್ಯಾಬ್ ನ ಚಾಲಕನಾಗಿರುವ ಎಲ್ಲಿಸ್ ಹಿಲ್ ಎಂಬುವರ ತಮ್ಮ ಪುತ್ರ ಡಾರೆಲ್ ಹಿಲ್ ಅಮೆರಿಕ ಒಲಿಂಪಿಕ್ ತಂಡದಲ್ಲಿ ಸ್ಥಾನ ಪಡೆದಿದ್ದು, ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಬ್ರೆಜಿಲ್ ಗೆ ತೆರಳಿದ್ದ. ಆದರೆ ತಂದೆ ಎಲ್ಲಿಸ್ ಗೆ ಮಾತ್ರ ಮಗನ ಪ್ರದರ್ಶನ ಕಾಣಲು ಹಣದ ಕೊರತೆ ಎದುರಾಗಿದ್ದರಿಂದ ಪರಿತಪಿಸಿದ್ದರು.
ಹೀಗೆ ದಿನ ಕಳೆದಂತೆ ಒಂದು ದಿನ ಲಿಝ್ ವಿಲ್ಲೋಕ್ ಎಂಬುವರು ಎಲ್ಲಿಸ್ ಹಿಲ್ ಅವರ ಉಬರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಎಲ್ಲಿಸ್ ತಮ್ಮ ಮಗನ ಗುಣಗಾನ ಮಾಡಿದ್ದಾರೆ. ತಮ್ಮ ಮಗ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಮಗನ ಪ್ರದರ್ಶನವನ್ನು ನೇರವಾಗಿ ಕಣ್ತುಂಬಿಕೊಳ್ಳಲು ಸಾಧ್ಯವಾಗದೆ ಇರುವುದರಿಂದ ತೊಳಲಾಡಿದ್ದಾರೆ. ಇದನ್ನು ಗಮನಿಸಿದ ಲಿಝ್ ಒಂದು ಉಪಾಯ ಮಾಡಿದ್ದಾರೆ.
ಲಿಝ್ ಪೀಪಲ್ ಮ್ಯಾಗಜೀನ್ ಗೆ ಸಂದರ್ಶನ ನೀಡಿದ್ದು, ಅದರಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ತಮ್ಮ ಪುತ್ರನ ಪ್ರದರ್ಶನವನ್ನು ಕಾಣದೆ ಪರಿತಪಿಸುತ್ತಿರುವ ತಂದೆಯ ಸ್ಥಿತಿಯನ್ನು ವಿಡಂಬಡಿಸಿದ್ದಾರೆ. ಜತೆಗೆ ಗೊ ಫಂಡ್ ಮೀ ಎಂಬ ಸೈಟ್ ಸ್ಥಾಪಿಸಿ ನಿಧಿ ಸಂಗ್ರಹಣಕ್ಕೆ ಮುಂದಾಗಿದ್ದಾರೆ. ಆ ಮೂಲಕ ಒಂದು ವಾರದಲ್ಲೇ 7,500 ಡಾಲರ್ ಹಣ ಸಂಗ್ರಹವಾಗಿದೆ. ಇದರಿಂದಾಗಿ ಸಂತೋಷಗೊಂಡಿರುವ ಎಲ್ಲಿಸ್ ಆಗಸ್ಟ್ 18ರಂದು ನಡೆಯಲಿರುವ ಪುತ್ರ ಡಾಲೆರ್ ಹಿಲ್ ಗುಂಡು ಎಸೆತದ ಪ್ರದರ್ಶನ ಕಾಣಲು ಬ್ರೆಜಿಲ್ ಗೆ ತೆರಳಲಿದ್ದಾರೆ.
ನಿಧಿ ಸಂಗ್ರಹ ಮೂಲಕ ತಮ್ಮ ತಂದೆಯನ್ನು ರಿಯೋ ಒಲಿಂಪಿಕ್ಸ್ ಬರುವಂತೆ ಮಾಡಿದ ಪ್ರಯಾಣಿಕ ಲಿಝ್ ಗೆ ಹಾಗೂ ಗೋ ಫಂಡ್ ಮೀ ನಿಧಿಗೆ ಹಣ ಕಳುಹಿಸಿದ ಹೃದಯವಂತ ಜನರಿಗೂ ವಂದನೆ ಸಲ್ಲಿಸಿದ್ದಾರೆ. ನನ್ನ ಪ್ರದರ್ಶನಕ್ಕೆ ಜನರ ಆಶೀರ್ವಾದ ಸಿಕ್ಕಿದೆ ಕ್ರೀಡಾಕೂಟದಲ್ಲಿ ನಾನು ಜಯ ಗಳಿಸಿ ತೀರುತ್ತೇನೆ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


