ಕ್ರೀಡೆ

ಆಕೆಯ ಬಗ್ಗೆ ಕೇಳುವ ಹಕ್ಕು ಯಾರಿಗೂ ಇಲ್ಲ: ವಿರಾಟ್ ಕೊಹ್ಲಿ ಅಸಮಾಧಾನ

ಕೆಲ ದಿನಗಳ ಬ್ರೇಕ್ ಅಪ್ ನಂತರ ಮತ್ತೆ ಅನುಷ್ಕಾ ಶರ್ಮ ಜತೆ ಒಂದಾಗಿರುವ ನಡುವೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ, ಮತ್ತೊಮ್ಮೆ ಆಕೆಯ ಪರ ..

ಆಕೆಯ ಬಗ್ಗೆ ಕೇಳುವ ಹಕ್ಕು ಯಾರಿಗೂ ಇಲ್ಲ: ವಿರಾಟ್ ಕೊಹ್ಲಿ ಅಸಮಾಧಾನ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ
Published On :

ನವದೆಹಲಿ: ಕೆಲ ದಿನಗಳ ಬ್ರೇಕ್ ಅಪ್ ನಂತರ ಮತ್ತೆ ಅನುಷ್ಕಾ ಶರ್ಮ ಜತೆ ಒಂದಾಗಿರುವ ನಡುವೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ, ಮತ್ತೊಮ್ಮೆ ಆಕೆಯ ಪರ ಬ್ಯಾಟಿಂಗ್ ಮಾಡಿದ್ದಾರೆ.

ಮುಂಬೈಯಲ್ಲಿ ‘ವಿರಾಟ್ಸ್ ಫ್ಯಾನ್ ಬಾಕ್ಸ್’ ಆಪ್ ಬಿಡುಗಡೆಯ ವೇಳೆ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಅಸಮಾಧಾನದಿಂದಲೇ ಪ್ರತಿಕ್ರಿಯಿಸಿದ ವಿರಾಟ್,  ಅನುಷ್ಕಾ ಶರ್ಮ ಬಗ್ಗೆ ನನ್ನ ಬಳಿ ಕೇಳುವ ಹಕ್ಕು ಯಾರೊಬ್ಬರಿಗೂ ಇಲ್ಲ’ ಎಂದು ಮತ್ತೊಮ್ಮೆ ಕಿಡಿಕಾರಿದ್ದಾರೆ.  ಈ ಬಗ್ಗೆ ಯಾರೂ ತಿಳಿದುಕೊಳ್ಳಬೇಕಾದ ಅಗತ್ಯವಿಲ್ಲ. ಈ ಬಗ್ಗೆ ಉತ್ತರಿಸುವ ಗೋಜಿಗೂ ಹೋಗುವುದಿಲ್ಲ ಎಂದಿದ್ದಾರೆ.

ಬಳಿಕ ಪತ್ರಕರ್ತೆಗೆ ಮರು ಪ್ರಶ್ನೆ ಮಾಡಿದ ವಿರಾಟ್, ನಿಮ್ಮ ವೈಯಕ್ತಿಕ ಜೀವನ ಹೇಗಿದೆ ಎಂದು ಹೇಳುತ್ತೀರಾ  ಎನ್ನುವ ಮೂಲಕ ತಮ್ಮ ಅಸಮಾಧಾನ ತೋರಿಸಿದ್ದಾರೆ. ಫ್ಯಾನ್​ ಬಾಕ್ಸ್ ಆಪ್ ಮೂಲಕ ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಅಭಿಮಾನಿಗಳು ನನ್ನೊಂದಿಗೆ ಕೇಳಬಹುದು. ಹಾಗಂತ ನನ್ನ ಜೀವನದ ಪ್ರತಿಯೊಂದು ವಿಚಾರಗಳನ್ನು ಹೇಳುತ್ತೇನೆ ಎಂಬ ಅರ್ಥವಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.